ಐಪಿಎಲ್‌ ಮಿನಿ ಹರಾಜು ; ಜಡೇಜಾ ಬೆಂಬಲಕ್ಕೆ ನಿಂತ ಧೋನಿ: ತಂಡದಿಂದ ಕೈ ಬಿಡದಂತೆ ಸಿಎಸ್‌ಕೆ ಆಡಳಿತ ಮಂಡಳಿಗೆ ಸೂಚನೆ

Prasthutha|

- Advertisement -

​​​​​​​ಚೆನ್ನೈ: ʻಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾರನ್ನು ಯಾವ ಕಾರಣಕ್ಕೂ ತಂಡದಿಂದ ಕೈಬಿಡಬಾರದು. ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಡಳಿತ ಮಂಡಳಿಗೆ ನಾಯಕ ಎಂಎಸ್‌ ಧೋನಿ ಖಡಕ್‌ ಸಲಹೆ ನೀಡಿದ್ದಾರೆ.

ʻಜಡೇಜಾ ಸ್ಥಾನವನ್ನು ತುಂಬಲು ಬೇರೆ ಯಾವುದೇ ಆಟಗಾರರಿಂದ ಸಾಧ್ಯವಿಲ್ಲ. ಐಪಿಎಲ್‌ ಮಿನಿ ಹರಾಜು ವೇಳೆ ಜಡೇಜಾರನ್ನು ತಂಡದಿಂದ ಬಿಡುಗಡೆಗೊಳಿಸಬಾರದು. ಅವರು ಸಿಎಸ್‌ಕೆಯ ಅವಿಭಾಜ್ಯ ಅಂಗ ಎಂದು ಧೋನಿ, ಆಡಳಿತ ಮಂಡಳಿ ಜೊತೆಗಿನ ಸಭೆಯಲ್ಲಿ ಹೇಳಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

- Advertisement -

ಡಿಸೆಂಬರ್‌ ಮಧ್ಯಭಾಗದಲ್ಲಿ ಬೆಂಗಳೂರಿನಲ್ಲಿ ಐಪಿಎಲ್‌ ಮಿನಿ ಹರಾಜು ನಡೆಯಲಿದೆ.  ಈ ಹಿನ್ನೆಲೆಯಲ್ಲಿ ನವೆಂಬರ್‌ 15ರ ಒಳಗಾಗಿ ಐಪಿಎಲ್‌ನ ಎಲ್ಲಾ 10 ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನೀಡಬೇಕಿದೆ. ಆಟಗಾರರ ಸಂಬಳಕ್ಕಾಗಿ ಖರ್ಚು ಮಾಡಲು ಫ್ರಾಂಚೈಸಿಗಳಿಗೆ ನಿಗಧಿಪಡಿಸಲಾಗಿರುವ ಮೊತ್ತವನ್ನು ಮುಂದಿನ ವರ್ಷ 90ರಿಂದ ಕೋಟಿಗೆ ಏರಿಸುವ ಸಾಧ್ಯತೆಯೂ ಇದೆ. ಕಳೆದ ವರ್ಷ ನಡೆದ ಮೆಗಾ ಹರಾಜಿನ ಬಳಿಕ ತಂಡಗಳ ಬಳಿ ಉಳಿದಿರುವ ಮತ್ತು ಆಟಗಾರರನ್ನು ಬಿಡುಗಡೆಗೊಳಿಸಿದ ಬಳಿಕ ಲಭ್ಯವಿರುವ ಮೊತ್ತವನ್ನು ಫ್ರಾಂಚೈಸಿಗಳು ಮಿನಿ ಹರಾಜಿನಲ್ಲಿ ವ್ಯಯಿಸಬಹುದಾಗಿದೆ.

2023ರ ಆವೃತ್ತಿಯ ಐಪಿಎಲ್‌ನಲ್ಲಿ ಸೂಪರ್‌ ಕಿಂಗ್ಸ್‌ ತಂಡ ಬಹಳ ವರ್ಷಗಳ ಬಳಿಕ ತವರು ಮೈದಾನ ಚೆನ್ನೈನಲ್ಲಿ ಪಂದ್ಯವನ್ನಾಡಲಿದೆ. ಈ ಮೈದಾನದಲ್ಲಿ ಜಡೇಜಾ ಅತ್ಯುತ್ತಮ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದ್ದಾರೆ. ಜಡೇಜಾರನು ಉಳಿಸಿಕೊಳ್ಳು ಇದೂ ಕೂಡ ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ. 

Join Whatsapp