ಬಪ್ಪ ಬ್ಯಾರಿ ವಂಶಸ್ಥರಿಂದ ಎಣ್ಣೆ ತಂದ ಬಳಿಕ ಬಪ್ಪನಾಡಿನಲ್ಲಿ ಪೂಜೆ ಪ್ರಾರಂಭವಾಗುತ್ತದೆ: ಶಾಸಕ ರಿಝ್ವಾನ್ ಅರ್ಷದ್

Prasthutha|

ಬೆಂಗಳೂರು: ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧದ ವರಸೆ ಹೆಚ್ಚಾಗಿದೆ. ಸಮಸ್ತ ಹಿಂದು ಬಾಂಧವರು ಎನ್ನುವ ಬ್ಯಾನರ್ ಅಡಿಯಲ್ಲಿ ಹಿಂದೂ ಜಾಗೃತನಾಗಿದ್ದಾನೆ, ಇಲ್ಲಿ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ಬರೆದು ಜಾತ್ರಾ ಮಹೋತ್ಸವ ನಡೆಯಲಿರುವ ದೇವಸ್ಥಾನಗಳ ಹೊರಭಾಗಗಲ್ಲಿ ಅಳವಡಿಸಲಾಗುತ್ತಿದೆ.

- Advertisement -

ಮುಲ್ಕಿಯ ಬಪ್ಪನಾಡು ಜಾತ್ರಾ ಮಹೋತ್ಸವದಲ್ಲಿಯೂ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಿಸಲಾಗಿದೆ ಎನ್ನುವ ಬ್ಯಾನರ್ ಗಳು ಪ್ರತ್ಯಕ್ಷಗೊಂಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ರಿಝ್ವಾನ್ ಅರ್ಷದ್ ಬಪ್ಪನಾಡು ದೇವಸ್ಥಾನವನ್ನು ನಿರ್ಮಿಸಿರುವುದೇ ಮುಸ್ಲಿಂ ವ್ಯಾಪಾರಿ ಎಂದಿದ್ದಾರೆ. ಅಲ್ಲದೇ ಬಪ್ಪ ಬ್ಯಾರಿ ವಂಶಸ್ಥರಿಂದ ಎಣ್ಣೆ ತಂದ ಬಳಿಕ ಬಪ್ಪನಾಡಿನಲ್ಲಿ ಪೂಜೆ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ.

ಮುಸ್ಲಿಂ ವ್ಯಾಪಾರಿ ಬಪ್ಪ ಬ್ಯಾರಿ ಬಪ್ಪನಾಡು ದೇವಸ್ಥಾನವನ್ನು ಕಟ್ಟಿದ್ದಾರೆ, ಆದರೆ ರಾಜಕೀಯ ಉದ್ದೇಶಕ್ಕೆ ಇಂದು ಸೌಹಾರ್ದ ಕೆಡಿಸುವ ಕಾರ್ಯಗಳು ನಡೆಯುತ್ತಿವೆ ಎಂದರು. ಸರಕಾರವೇ ಚುನಾವಣಾ ದೃಷ್ಟಿಯಿಂದ ಸಾಮರಸ್ಯ ಕೆಡಿಸುವ ಕೆಲಸಕ್ಕೆ ಕೈ ಹಾಕಿದ್ದು, ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ನಿಷೇಧ ಬ್ಯಾನರ್ ಹಾಕಿಸುತ್ತಿದೆ ಎಂದು ಅರ್ಷದ್ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಬಪ್ಪನಾಡು ಮಾತ್ರವಲ್ಲ ಮಾರಿಕಾಂಬಾ ದೇವಸ್ಥಾನವನ್ನು ನಿರ್ಮಿಸಿದ್ದು ಮುಸ್ಲಿಂ ಸೈನಿಕ. 1740ರಲ್ಲಿ ಮುಸ್ಲಿಂ ಸೈನಿಕನ ಕನಸಿನಲ್ಲಿ ಮಾರಿಕಾಂಬೆ ಬಂದು ದೇವಸ್ಥಾನ ಕಟ್ಟಲು ಹೇಳಿದಾಗ ದೇವಸ್ಥಾನ ನಿರ್ಮಾಣ ಆಗಿದೆ. ಇದುವೇ ನಿಜವಾದ ಸಾಮರಸ್ಯ ಎಂದರು.




Join Whatsapp