ಚುನಾವಣೆ ಹೊತ್ತಲ್ಲಿ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

Prasthutha|

ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವು ವಾರಗಳ ಮೊದಲು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿದೆ.

- Advertisement -

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ₹ 2 ರಷ್ಟು ಕಡಿಮೆ ಮಾಡಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ. ದೇಶಾದ್ಯಂತ ಈ ಬೆಲೆ ಇಳಿಕೆ ಅನ್ವಯವಾಗಲಿದೆ ಎಂದಿದ್ದಾರೆ.

ಪರಿಷ್ಕೃತ ಬೆಲೆಯು ಮಾರ್ಚ್ 15, ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ₹ 2 ಇಳಿಸುವ ಮೂಲಕ ದೇಶದ ಪ್ರತಿಷ್ಠಿತ ಪ್ರಧಾನಿ ಮೋದಿ ಅವರು ಕೋಟ್ಯಂತರ ಭಾರತೀಯರ ಕುಟುಂಬದ ಕಲ್ಯಾಣ ತಮ್ಮ ಗುರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಹೇಳುವ ಮೂಲಕ‌‌ ಸಚಿವರು ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿದ ಬೆಲೆ ಇಳಿಕೆ ಇದು ಎಂದು ಒಪ್ಪಿಕೊಂಡಿದ್ದಾರೆ.

- Advertisement -

Join Whatsapp