ನವದೆಹಲಿ: ಪೆಟ್ರೋಲಿಯಂ ಮತ್ತು ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಗಳ ಬೆಲೆ ಪರಿಷ್ಕರಿಸಿವೆ. 19 ಕೆಜಿ ತೂಕದ ಕಮರ್ಷಿಯಲ್ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ₹171.5 ಕಡಿತಗೊಳಿಸಲಾಗಿದೆ.
ದೆಹಲಿಯಲ್ಲಿ 19 ಕೆ.ಜಿ ಸಿಲಿಂಡರ್ ನ ಬೆಲೆ ಈಗ 1,856.50 ರೂಪಾಯಿ ಇದೆ. ಕಳೆದ ತಿಂಗಳು ಕೂಡ 91.50 ರೂ. ಇಳಿಕೆ ಮಾಡಲಾಗಿತ್ತು. ತೈಲ ಕಂಪನಿಗಳು ಈ ವರ್ಷ ಮಾರ್ಚ್ 1 ರಂದು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ಯೂನಿಟ್ ಗೆ 350.50 ರೂ ಮತ್ತು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ಯೂನಿಟ್ ಗೆ 50 ರೂ. ಹೆಚ್ಚಿಸಿದ್ದವು. ಜನವರಿ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್ ಗೆ 25 ರೂ. ಏರಿಕೆ ಮಾಡಲಾಗಿತ್ತು.