ಸೌದಿ ಅರೇಬಿಯಾ: ಕೇರಳ ಮೂಲದ ಯುವಕನ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

Prasthutha|

ರಿಯಾದ್: ಸೌದಿ ಅರೇಬಿಯಾದಲ್ಲಿ ಕೇರಳ ಮೂಲದ ಯುವಕನೊಬ್ಬನ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

- Advertisement -

ತಿರುವನಂತಪುರ ಜಿಲ್ಲೆಯ ಪುಲ್ಲುರ್ಕೋಣಂನ ಪಾರವಿಳ ವೀಟ್ಟಿಲ್ ಶಾನ್ (30) ಅವರ ಮೃತದೇಹ ತಬೂಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆರು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

ಅವಿವಾಹಿತನಾದ ಶಾನ್ ಕಳೆದ ಏಳು ವರ್ಷಗಳಿಂದ ತಬೂಕ್‌‌ನ ಮೀನು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಒಂದೂವರೆ ವರ್ಷದ ಹಿಂದೆ ಶಾನ್ ಊರಿಗೆ ಹೋಗಿ ರಜೆ ಮುಗಿಸಿ ಮರಳಿದ್ದ ಎಂದು ತಿಳಿದು ಬಂದಿದೆ.

ಶಾನ್ ಅವರು ತಂದೆ ಷಹಜಹಾನ್, ತಾಯಿ ಲತೀಫಾ ಬೀವಿ ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ. ಶಾನ್ ನಿಧನದ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



Join Whatsapp