ಬಾಬರಿ ಮಸೀದಿ ಧ್ವಂಸ | ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರಿಗೆ ಉಪ ಲೋಕಾಯುಕ್ತ ಹುದ್ದೆ

Prasthutha|

ಲಖ್ನೋ : ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರನ್ನು ಉತ್ತರ ಪ್ರದೇಶ ಸರ್ಕಾರ ಉಪ ಲೋಕಾಯುಕ್ತರಾಗಿ ನೇಮಿಸಿದೆ. ಇತ್ತೀಚೆಗೆ ನಿವೃತ್ತಿ ಹೊಂದಿದ ಸಿಬಿಐ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಿಸಲಾಗಿದೆ.

- Advertisement -

ಸಾಮಾಜಿಕ ಸೇವಕರು ಮತ್ತು ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪಗಳನ್ನು ತನಿಖೆ ಮಾಡುವ ಈ ಶಾಸನಬದ್ಧ ಪ್ರಾಧಿಕಾರವು ಒಂದು ಲೋಕಾಯುಕ್ತ ಮತ್ತು ಮೂವರು ಉಪ ಲೋಕಾಯುಕ್ತರನ್ನು ಹೊಂದಿರುತ್ತದೆ. ಇದರ ಅಧಿಕಾರಾವಧಿ ಎಂಟು ವರ್ಷಗಳು.

‘ಯಾದವ್ ಅವರನ್ನು ಏಪ್ರಿಲ್ 6 ರಂದು ರಾಜ್ಯಪಾಲರು ಮೂರನೇ ಉಪ ಲೋಕಾಯುಕ್ತರಾಗಿ ನೇಮಕ ಮಾಡಿದ್ದಾರೆ. ಲೋಕಾಯುಕ್ತ ಸಂಜಯ್ ಮಿಶ್ರಾ ಅವರ ಉಪಸ್ಥಿತಿಯಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು’ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸುರೇಂದ್ರ ಕುಮಾರ್ ಯಾದವ್ ಅವರು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದಾಗ 2020ರ ಸೆಪ್ಟೆಂಬರ್ 30 ರಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ 32 ಆರೋಪಿಗಳನ್ನು ಖುಲಾಸೆಗೊಳಿಸಿದ್ದರು.



Join Whatsapp