ಮುಸ್ಲಿಂ ಲೀಗ್ ಶಾಸಕ ಕೆ.ಎಂ ಶಾಜಿ ಮನೆಯಿಂದ ದಾಖಲೆರಹಿತ 50 ಲಕ್ಷ ನಗದು ವಶಪಡಿಸಿಕೊಂಡ ಜಾಗೃತ ದಳ!

Prasthutha: April 13, 2021

ಮುಸ್ಲಿಂ ಲೀಗ್ ಮುಖಂಡ ಮತ್ತು ಅಝಿಕ್ಕೋಡ್ ಶಾಸಕರಾದ ಕೆ.ಎಂ.ಶಾಜಿಯವರ ಕಣ್ಣೂರಿನಲ್ಲಿರುವ ಮನೆಯಿಂದ ದಾಖಲೆರಹಿತ 50 ಲಕ್ಷ ನಗದು ವಿಜಿಲೆನ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ ಆರೋಪದಲ್ಲಿ ವಿಜಿಲೆನ್ಸ್ ಕೆ.ಎಂ.ಶಾಜಿಯವರ ವಿರುದ್ಧ ನಿನ್ನೆ ಪ್ರಕರಣ ದಾಖಲಿಸಿದ ಕೆಲವೇ ಗಂಟೆಗಳಲ್ಲಿ ವಿಜಿಲೆನ್ಸ್ ತಂಡ ಕ್ಯಾಲಿಕಟ್ ಮತ್ತು ಅಝಿಕ್ಕೋಡ್‌ನಲ್ಲಿರುವ ಅವರ ಮನೆಗಳಲ್ಲಿ ತೀವ್ರ ಶೋಧ ನಡೆಸಿತ್ತು.

ತೀವ್ರ ಶೋಧ ನಡೆಸಿದ ತಂಡ ಕಣ್ಣೂರಿನ ಚಾಲಾಡ್ ಮನಲ್ ಎಂಬಲ್ಲಿನ ಮನೆಯಿಂದ ದಾಖಲೆರಹಿತ ಹಣವನ್ನು ವಶಪಡಿಸಿಕೊಂಡಿದೆ ಎಂದು ವಿಜಿಲೆನ್ಸ್ ತಿಳಿಸಿದೆ. ಶಾಜಿಯವರ ಕ್ಯಾಲಿಕಟ್ ನಲ್ಲಿರುವ ಮನೆಯ ಮೇಲೆ ದಾಳಿ ನಡೆಸಲು ವಿಜಿಲೆನ್ಸ್ ಎಸ್‌ಪಿ ಸಸಿಧರನ್ ನೇತೃತ್ವ ವಹಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಕೆ. ಎಂ ಶಾಜಿ, ಪಿಣರಾಯಿ ವಿಜಯನ್ ಅವರು ವಿಜಿಲೆನ್ಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿ ದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ತನ್ನ ಮನೆಯಿಂದ ವಶಪಡಿಸಿಕೊಂಡ ಹಣಕ್ಕೆ ದಾಖಲೆ ಇದೆ. ಮೂರು ದಿವಸ ಬ್ಯಾಂಕ್ ರಜಾ ದಿನವಾಗಿರುವುದರಿಂದ ಹಣವನ್ನು ಜಮಾ ಮಾಡಲಾಗಲಿಲ್ಲ. ಚುನಾವಣಾ ಅಭ್ಯರ್ಥಿಯಾಗಿರುವುದರಿಂದ ತನ್ನ ಕೈಯಲ್ಲಿ ಹಣ ಇರುವುದನ್ನು ಖಚಿತಪಡಿಸಿ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತರೂ ವಕೀಲರೂ ಆದ ಎಂ.ಆರ್.ಹರೀಶ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಜಿಲೆನ್ಸ್ ವಿಶೇಷ ತಂಡ ಕೆ.ಎಂ.ಶಾಜಿಯನ್ನು ತನಿಖೆ ನಡೆಸಿತ್ತು. ಕೆಎಂ ಶಾಜಿ 2011 ಮತ್ತು 2020 ರ ನಡುವೆ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದರು ಎಂದು ವಿಜಿಲೆನ್ಸ್ ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಜಿಲೆನ್ಸ್ ಚುನಾವಣೆಗೂ ಮುನ್ನ ನ್ಯಾಯಾಲಯಕ್ಕೆ ವರದಿ ನೀಡಿತ್ತು ಎನ್ನಲಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!