ಪೊಲೀಸರು ಮೇಲಿನವರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು: ಹರೀಶ್ ಪೂಂಜ

Prasthutha|

ಬೆಳ್ತಂಗಡಿ: ಪೊಲೀಸರು ಮೇಲಿನವರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

- Advertisement -

ಪೊಲೀಸ್ ಅಧಿಕಾರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಶರಣಾದ ಹರೀಶ್ ಪೂಂಜಾರನ್ನು ವಿಚಾರಣೆ ನಡೆಸಿ ಸ್ಟೇಷನ್ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.

ಸುದ್ದಿಗಾರರೊದಿಗೆ ಮಾತನಾಡಿದ ಪೂಂಜ, ಈ ಭಾಗದ ಜನರ ಪ್ರತಿನಿಧಿಯಾಗಿ ಅವರ ಕಷ್ಟ ಮತ್ತು ದೂರು ದುಮ್ಮಾನಗಳಿಗೆ ಸ್ಪಂದಿಸುವುದು ತನ್ನ ಕರ್ತವ್ಯ ಮತ್ತು ಹಕ್ಕು ಸಹ ಆಗಿದೆ ಎಂದು ಹೇಳಿದರು. ಕಾರ್ಯಕರ್ತನ ಬಂಧನ ವಿರೋಧಿಸಿ ಮರುದಿನ ಉಳಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ, ಅದನ್ನೇ ಆಧಾರವಾಗಿಟ್ಟುಕೊಂಡು ತನ್ನ ವಿರುದ್ಧ ಕೇಸ್ ದಾಖಲಿಸಲಾಗಿತ್ತು ಎಂದರು. ತಾವು ಮಾಡುತ್ತಿರುವುದು ತಪ್ಪು ಮತ್ತು ಕಾನೂನುಬಾಹಿರ ಅಂತ ಗೊತ್ತಿದ್ದರೂ ಪೊಲೀಸರು ತನ್ನನ್ನು ಬಂಧಿಸಲು ಮನೆಗೆ ಬಂದಿದ್ದರು. ಕೆಲ ಮಂತ್ರಿಗಳ ಆಗಾಧವಾದ ಒತ್ತಡದಲ್ಲಿ ಪೋಲೀಸರು ಕೆಲಸ ಮಾಡುತ್ತಿದ್ದಿದ್ದು ಮೇಲ್ನೋಟಕ್ಕೆ ಗೊತ್ತಾಗುತಿತ್ತು ಎಂದು ಪೂಂಜಾ ಹೇಳಿದರು.

Join Whatsapp