ಅಸಮರ್ಪಕ ಕಸವಿಲೇವಾರಿ: ಬಜ್ಪೆ ನಾಗರಿಕರ ವೇದಿಕೆಯ ವತಿಯಿಂದ ಪ್ರತಿಭಟನಾ ಮೆರವಣಿಗೆ

Prasthutha|

ಬಜ್ಪೆ: ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಅಸಮರ್ಪಕ ಕಸವಿಲೇವಾರಿ ಮಾಡುತ್ತಿದ್ದು, ಮನೆಗಳಲ್ಲಿ ಶೇಖರಿಸಿದ ಕಸಗಳಲ್ಲಿ ಹುಳಗಳು ಹುಟ್ಟಿಕೊಂಡು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಜ್ಪೆ ನಾಗರಿಕರ ವೇದಿಕೆಯ ವತಿಯಿಂದ ಬಜ್ಪೆ ಚರ್ಚ್ ಬಳಿಯಿಂದ ಪಟ್ಟಣ ಪಂಚಾಯತ್ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು.

- Advertisement -

ಪಟ್ಟಣ ಪಂಚಾಯತ್ ಆಡಳಿತ ವ್ಯವಸ್ಥೆ ವಿರುದ್ಧ ವೇದಿಕೆಯ ಸಂಚಾಲಕರು ಮಾತನಾಡಿ, ನಾಗರಿಕರು ರೊಚ್ಚಿಗೇಳುವ ಮುನ್ನ ಎಚೆತ್ತುಕೊಳ್ಳಿ ಇಲ್ಲದಿದ್ದಲ್ಲಿ ಅದರ ಪರಿಣಾಮ ಎದುರಿಸಿ ಎಂದು ಎಚ್ಚರಿಸಿ ದರು.

ರೊಚ್ಚಿಗೆದ್ದ ನಾಗರಿಕರು ಆಡಳಿತಾಧಿ ಕಾರಿಯಾದ ತಹಶೀಲ್ದಾರ್ ಬಂದು ಮನವಿ ಸ್ವೀಕರಿಸದಿದ್ದಲ್ಲಿ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರರು ನಾಗರಿಕರ ಬೇಡಿಕೆಗೆ ಸ್ಪಂದಿಸಿ, ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮನವಿ ಸ್ವೀಕರಿಸಿ, ಆದಷ್ಟು ಬೇಗ ಶಾಶ್ವತ ಪರಿಹಾರ ಮಾಡುವುದಾಗಿ ತಿಳಿಸಿದರು.

- Advertisement -

ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಸಿರಾಜ್ ಬಜ್ಪೆ ,ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್ ,ದಲಿತ ಸಂಘ ಸಮಿತಿಯ ರಾಜ್ಯ ಸಂಚಾಲಕರಾದ ದೇವದಾಸ್, ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ ,ಮಹಿಳಾ ಮುಖಂಡರಾದ ವಿಜಯ ಗೋಪಾಲ ಸುವರ್ಣ , ರೋಟರಿ ಮುಖಂಡರುಗಳಾದ ಮಾದವ ಅಮೀನ್ ,ರಾಬರ್ಟ್ ರೇಗೊ ,ಕ್ರೈಸ್ತ ಸಮುದಾಯದ ಮುಖಂಡರಾದ ಜೇಕಬ್ ಪಿರೇರಾ,ಕೇಂದ್ರ ಮಸೀದಿ ಅಧ್ಯಕ್ಷರಾದ ಖಾದರ್ ಸಾಬ್,SDPI ಮುಖಂಡರಾದ ಅಥಾವುಲ್ಲಾ ಜೋಕಟ್ಟೆ ,ಆಯಿಷಾ ,ನಜೀರ್ ಕಿನ್ನಿಪದವು ,ಇರ್ಷಾದ್ ,ಹಮೀದ್ ಕೂಲ್ ಪಾಯಿಂಟ್ ,ಹಸೈನಾರ್ ಹಕೀಮ್ ಕೊಳಂಬೆ ,ಕುಡುಬಿ ಸಮಾಜದ ನಾಯಕರಾದ ಶೇಖರ್ ಗೌಡ,ಬಿಜೆಪಿ ಮುಖಂಡರುಗಳಾದ ರವಿ ಪೂಜಾರಿ ,ಸುಮಾನಿ ,ಪ್ರಭಾ ಶೆಟ್ಟಿ ಕಾಂಗ್ರೆಸ್ ಮುಖಂಡರುಗಳಾದ  ಡಾಕ್ಟರ್ ಶೇಖರ್ ಪೂಜಾರಿ.ದೀಪಕ ಪೂಜಾರಿ ಪೆರ್ಮುದೆ ,ಬಿ ಜೆ ರಹೀಮ್,ಉದಯ ಕುಮಾರ್,ರೋನಿ ಪೆರ್ಮುದೆ ,ನವಾಜ್ ಭಟ್ರಕೆರೆ INTUC ಸಂಘಟನ ಕಾರ್ಯದರ್ಶಿ ಜಲಾಲುದ್ದೀನ್ ,ಹಫೀಜ್ ಕೊಳಂಬೆ,DSS ಮುಖಂಡರುಗಳಾದ ಚಂದ್ರಶೇಖರ್ ,ಸಂಕಪ್ಪ ಕಾಂಚನ್ ಮಂಜಪ್ಪ ಪುತ್ರನ್ ಮತ್ತು ಗ್ರಾ ಪಂ ಮಾಜಿ ಸದಸ್ಯರುಗಳು, ಊರಿನ ಹಿರಿಯರು, ಉದ್ಯಮಿಗಳು, ಮಹಿಳಾ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು .

Join Whatsapp