ಬೆಳ್ತಂಗಡಿಗೂ ಕಾಲಿಟ್ಟ ‘PAYCM’ ಪೋಸ್ಟರ್

Prasthutha|

ಬೆಳ್ತಂಗಡಿ: ರಾಜ್ಯದೆಲ್ಲೆಡೆ ಕಾಂಗ್ರೆಸ್ ನಡೆಸುತ್ತಿರುವ ‘ಪೇ ಸಿಎಮ್’ ಪೋಸ್ಟರ್ ಅಭಿಯಾನವು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ನಡುವೆ ದ.ಕ ಜಿಲ್ಲೆಯ ಬೆಳ್ತಂಗಡಿಯಲ್ಲೂ ಈ ಪೋಸ್ಟರ್ ಪತ್ತೆಯಾಗಿದೆ.

- Advertisement -

ಸದ್ಯ ಬೆಳ್ತಂಗಡಿಯ ವಿವಿಧ ಸ್ಥಳಗಳಲ್ಲಿ ಶುಕ್ರವಾರ ರಾತ್ರಿಯ ವೇಳೆ ‘ಪೇ ಸಿಎಮ್’ ಪೋಸ್ಟರ್ ಅನ್ನು ಅಂಟಿಸಲಾಗಿದ್ದು, ಇಂದು ಬೆಳಗ್ಗಿನಿಂದ ಇದನ್ನು ಯಾರೋ ತೆರವುಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ವಿವಾದಾತ್ಮಕ ಈ ಪೋಸ್ಟರ್’ಗಳು ಬೆಳ್ತಂಗಡಿಯ ಬಸ್ ನಿಲ್ದಾಣ, ಸಂತೆಕಟ್ಟೆ ಬಸ್ ನಿಲ್ದಾಣ, ಚರ್ಚ್ ರೋಡಿನ ಬಸ್ ನಿಲ್ದಾಣವನ್ನು ಒಳಗೊಂಡಂತೆ ಹಲವೆಡೆ ಅಂಟಿಸಲಾಗಿತ್ತು.

Join Whatsapp