ಬೆಳ್ತಂಗಡಿ: ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

Prasthutha|

ಬೆಳ್ತಂಗಡಿ: ಸಾಲ ತೀರಿಸಲಾಗದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯದಲ್ಲಿ ನಡೆದಿದೆ.

- Advertisement -

ನೆರಿಯ ಗ್ರಾಮದ ಚಂದ್ರಶೇಖರ್ (24) ಮೃತ ಯುವಕ. ಗಾರೆ ಮತ್ತು ವೈರಿಂಗ್ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ತನ್ನ ಗೆಳೆಯರ ಜೊತೆ ಸೇರಿ ಶಬರಿ ಎಂಬ ಸ್ವಸಹಾಯ ಸಂಘ ಮಾಡಿದ್ದ. ಈ ಸಂಘದ ಮೂಲಕ ಉಜಿರೆಯ ಖಾಸಗಿ ಖಾಸಗಿ ಬ್ಯಾಂಕಿನಿಂದ 4ಲಕ್ಷ ರೂ ಸಾಲ ಪಡೆದುಕೊಂಡಿದ್ದು, ಈ ಹಣವನ್ನು ಎಂಟು ಜನ ಹಂಚಿಕೊಂಡಿದ್ದಾರೆ. ಆದರೆ ಚಂದ್ರಶೇಖರ್ ತೆಗೆದ  ಸಾಲದ ಹಣವನ್ನು ಅನಿವಾರ್ಯ ಇದೆ ಎಂದು ಹೇಳಿ ಗೆಳೆಯ ಯೋಗೀಶ್ ಎಂಬಾತ ಪಡೆದುಕೊಂಡಿದ್ದ.

ಸಾಲ ಕಟ್ಟದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ಪದೇ ಪದೇ ಚಂದ್ರಶೇಖರ್ ಗೆಕರೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಚಂದ್ರಶೇಖರ್ ಕಳೆದ ವಾರ ಆತ್ಮಹತ್ಯೆಗೆ ಯತ್ನಿಸಿದ್ದ.ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಕೋಮಾ ಸ್ಥಿತಿಗೆ ತಲುಪಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.