ಜೈಪುರ: ಆಗಸ್ಟ್ 15 ರಂದು ಕ್ಯಾಬಿನೆಟ್ ಸಚಿವರು, ಕಲೆಕ್ಟರ್, ಎಸ್ಪಿಯ ಸಮ್ಮುಖದಲ್ಲಿ ಪ್ರಶಂಸನೀಯ ಕೆಲಸಕ್ಕಾಗಿ ಗೌರವಿಸಲ್ಪಟ್ಟ ಜಿಲ್ಲಾ ಶಿಕ್ಷಣಾಧಿಕಾರಿಯನ್ನು, 50,000 ರೂ.ಗಳ ಲಂಚ ಸ್ವೀಕರಿಸುವಾಗ ಎಸಿಬಿ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.
ಇದರ ಜೊತೆಗೆ ಜಿಲ್ಲಾ ಶಿಕ್ಷಣಾಧಿಕಾರಿ ಕೇಸರ್ ಡಾನ್ ರತ್ನು ಅವರು 5 ದಿನಗಳ ನಂತರ ನಿವೃತ್ತಿಯಾಗಲಿದ್ದಾರೆ.
ಶಿಕ್ಷಣ ಅಧಿಕಾರಿ ಅವರು ವೇತನ ಮತ್ತು ಇಲಾಖಾ ವಿಚಾರಣೆಗೆ ಸಹಾಯ ಮಾಡುವ ಹೆಸರಿನಲ್ಲಿ 2 ಲಕ್ಷ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಶಾಲೆಯ ಶಿಕ್ಷಕನೊಬ್ಬ ಎಸಿಬಿ ಗೆ ದೂರು ನೀಡಿದ್ದರು. ಆಗಸ್ಟ್ 24 ರಂದು, ದೂರನ್ನು ಪರಿಶೀಲಿಸಿ ಶನಿವಾರ ಕ್ರಮ ತೆಗೆದುಕೊಳ್ಳಲಾಗಿದೆ
ಮಾಧ್ಯಮಗಳೊಂದಿಗೆ ಮಾತನಾಡಿದ ಎಸಿಬಿ ಡಿಎಸ್ಪಿ ಅಣ್ಣಾರಾಜ್, ಬಾರ್ಮರ್ ಜಿಲ್ಲೆಯ ಚೌಹಟನ್ ಪಟ್ಟಣದ ಸ್ಟೇಷನರಿ ಅಂಗಡಿಯಲ್ಲಿ ಬ್ರೋಕರ್ ಜೀವಂದನ್ ಅಶು ಸಿಂಗ್ ಮೂಲಕ 50,000 ರೂ.ಗಳ ಲಂಚ ಸ್ವೀಕರಿಸುವಾಗ ಕೇಸರ್ ಡಾನ್ ರತ್ನು ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.