ಕಾರವಾರ: ಸಿರಸಿ ಉಪವಿಭಾಗದ ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಕೆ. ಸಿ. ಮೋಹನರವರಿಗೆ ಮೊಬೈಲ್ ಫೋನ್ ಲಂಚ ಕೇಳಿದಕ್ಕಾಗಿ ಒಂದು ವರ್ಷದ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಲಾಗಿದೆ.
ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಆಪಾದಿತನ ವಿರುದ್ಧ ಭ್ರಷ್ಟ್ಟಾಚಾರ ಪ್ರತಿಬಂಧಕ ಕಾಯ್ದೆ-1988 ಕಲಂ:07, 13(1) (ಡಿ) ಸಹಿತ 13 (2) ನೇದ್ದರಂತೆ ದಂಡ ಹಾಗೂ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಕಲಂ 07 ರ ಅಡಿಯಲ್ಲಿ 1 ವರ್ಷ ಸಾದಾ ಕಾರಾವಾಸ ಹಾಗೂ ರೂ. 5000 ದಂಡ ವಿಧಿಸಿದ್ದು ಹಾಗೂ ಕಲಂ:13(1) (ಡಿ) ಸಹಿತ 13(2) ರ ಅಡಿಯಲ್ಲಿ 1 ವರ್ಷ ಸಾದಾ ಕಾರಾವಾಸ ಹಾಗೂ ರೂ. 5000 ದಂಡ ವಿಧಿಸಿದ್ದು ಇರುತ್ತದೆ. ದಂಡ ಪಾವತಿಸದೇ ಇದ್ದಲ್ಲಿ ಹೆಚ್ಚುವರಿ 6 ತಿಂಗಳ ಸಾದಾ ಕಾರಾವಾಸ ಶಿಕ್ಷೆಗೆ ಗುರಿಪಡಿಸಲು ಆದೇಶಿಸಿರುತ್ತಾರೆ.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಕೆ. ಸಿ. ಮೋಹನ ಮೊಬೈಲ್ ಅಂಗಡಿಯೊಂದರ ಮಾಲಕನಿಂದ ಮೊಬೈಲ್ ಫೋನ್ ಲಂಚ ಕೇಳಿ ಸಿಕ್ಕಿಬಿದ್ದಿದ್ದರು. ಅಂಗಡಿಯಲ್ಲಿರುವ ಮೊಬೈಲ್ ಸೆಟ್ಟಗಳನ್ನು, ಅದರ ಬಿಲ್ಲನ್ನು ಹಾಜರ ಪಡಿಸದ ಹಾಗೂ ಉತ್ಪಾದಕರ ಹೆಸರು ವಿಳಾಸ ಹಾಗೂ ದಿನಾಂಕಗಳನ್ನು ನಮೂದಿಸದ ಕಾರಣ ಆ ಮೊಬೈಲ್ ಫೋನ್‌ಗಳ ಗಳನ್ನು ಜಪ್ತಿ ಮಾಡಲಾಗಿದ್ದು, ನಾಗರಾಜ 20-25 ಸಾವಿರ ದಂಡವನ್ನು ಭರಿಸಲು ಅಂಗಡಿದಾರರಿಗೆ ಹೇಳಿದ್ದರು. ನಂತರ ದಂಡದ ಹಣವನ್ನು ಕಡಿಮೆ ಮಾಡಲು ಲಂಚದ ರೂಪದಲ್ಲಿ ಒಂದು ಸ್ಯಾಮ್ಸೆಂಗ್ ಮೊಬೈಲ್ ಸೆಟ್ಟಿಗೆ ಬೇಡಿಕೆ ಇಟ್ಟು ದಂಡವನ್ನು 3000 ರೂ.ಗೆ ಇಳಿಸಿದ್ದರು.