ನಾಪತ್ತೆಯಾಗಿದ್ದ ಕೇರಳದ ಪೊಲೀಸ್ ಅಧಿಕಾರಿ ಮಂಗಳೂರಿನಲ್ಲಿ ಪತ್ತೆ!

Prasthutha|

ಮಂಗಳೂರು: ಕೇರಳದ ಕಣ್ಣೂರಿನಿಂದ ನಾಪತ್ತೆಯಾಗಿದ್ದ ತಲಶ್ಶೇರಿ ಪೊಲೀಸ್ ಠಾಣೆಯ ಎಸ್‌ಐ ಕೋಳಯಾಡ್ ಮೂಲದ ಸಿಪಿ ಲಿನೀಶ್ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

- Advertisement -

ಏಪ್ರಿಲ್ 24ರಿಂದ ಲಿನೀಶ್ ಕಾಣೆಯಾಗಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಕೇರಳ ಪೊಲೀಸರು ಲಿನೀಶ್ ಮಂಗಳೂರಿನಲ್ಲಿ ಇರುವುದಾಗಿ ಪತ್ತೆ ಹಚ್ಚಿದ್ದಾರೆ.

ಭಾನುವಾರ ರಾತ್ರಿ ಡ್ಯೂಟಿ ಮುಗಿಸಿ ಪೊಲೀಸ್ ಕ್ವಾರ್ಟರ್ಸ್ ಗೆ ಹೋಗಿದ್ದ ಲಿನೀಶ್ ದಿಢೀರ್ ಕಾಣೆಯಾಗಿದ್ದರು.

Join Whatsapp