ಮುಸ್ಲಿಮರ ಜನಾಂಗಿಯ ಹತ್ಯೆಗೆ ಕರೆ ನೀಡಿ ತಲೆಮರೆಸಿಕೊಂಡಿದ್ದ ಆರೋಪಿ ಪಿಂಕಿ ಚೌಧರಿಯ ಅರೆಸ್ಟ್

Prasthutha|

ನವದೆಹಲಿ: ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನೆಕಾರಿ ಘೋಷಣೆ ಕೂಗಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕ ಭೂಪೇಂದ್ರ ಥೋಮರ್ ಅಲಿಯಾಸ್ ಪಿಂಕಿ ಚೌಧರಿ ಕೊನೆಗೂ ಮಂಗಳವಾರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

https://twitter.com/scribe_prashant/status/1432637648703668230

ಪಿಂಕಿ ಚೌಧರಿ ತನ್ನ ನೂರಾರು ಬೆಂಬಲಿಗರೊಂದಿಗೆ ದೆಹಲಿಯ ದೇವಸ್ಥಾನ ಮಾರ್ಗ ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಪೊಲೀಸ್ ಠಾಣೆಯ ಬಳಿ ಆತನ ಬೆಂಬಲಿಗರು ಅತನನ್ನು ಹೂಮಾಲೆಗಳೊಂದಿಗೆ ಸ್ವಾಗತಿಸಿದರು. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪಿಂಕಿ ಚೌಧರಿ, ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದರಿಂದ ಶರಣಾಗುವುದಾಗಿ ತಿಳಿಸಿದ್ದರು.

- Advertisement -

ಪ್ರಕರಣದ ಮೇಲೆ ಕಾರ್ಯನಿರ್ವಹಿಸಿದ ಪೊಲೀಸರು ಬಿಜೆಪಿ ನಾಯಕ ಮತ್ತು ವಕೀಲರಾದ ಅಶ್ವಿನಿ ಉಪಾಧ್ಯಾಯ ಸೇರಿದಂತೆ 7 ಆರೋಪಿಗಳನ್ನು ಈ ಹಿಂದೆ ಬಂಧಿಸಿದ್ದರು. ಮುಸ್ಲಿಮ್ ವಿರೋಧಿ ಘೋಷಣೆ ಮತ್ತು ಜನಾಂಗಿಯ ಹತ್ಯೆಯನ್ನು ನಡೆಸಲು ಹಿಂದುತ್ವವಾದಿಗಳಿಗೆ ಕರೆ ನೀಡಿದ ಸಂದರ್ಭದಲ್ಲಿ ಅಶ್ವಿನಿ ಉಪಾಧ್ಯಾಯ ಪ್ರತಿಭಟನಾ ಸ್ಥಳದಲ್ಲಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ನಂತರ ನ್ಯಾಯಾಲಯವು ಜಾಮೀನು ನೀಡಿತ್ತು.

- Advertisement -