ದೋಹಾದಲ್ಲಿ ತಾಲಿಬಾನ್ ನೊಂದಿಗೆ ಮಾತುಕತೆ ನಡೆಸಿದ ಭಾರತ

Prasthutha|

ನವದೆಹಲಿ: ಅಮೆರಿಕವು ಅಫ್ಘಾನಿಸ್ತಾನದಿಂದ ತನ್ನ ಸೈನ್ಯವನ್ನು ವಾಪಸು ಪಡೆದ ಬೆನ್ನಲ್ಲೇ ಭಾರತ ತಾಲಿಬಾನ್ ನೊಂದಿಗೆ ತನ್ನ ಮೊದಲ ಔಪಚಾರಿಕ ರಾಜತಾಂತ್ರಿಕ ಮಾತುಕತೆಯನ್ನು ನಡೆಸಿದೆ.

ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಹಾಗೂ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಮುಹಮ್ಮದ್ ಅಬ್ಬಾಸ್ ಸ್ವಾನೆಕ್ ಝೈ ಮಾತುಕತೆ ನಡೆಸಿದರು.

- Advertisement -

ಭಾರತೀಯರು ಸ್ವದೇಶಕ್ಕೆ ಹಿಂದಿರುಗಲು ಸಹಕರಿಸುವುದಾಗಿ ಸಭೆಯಲ್ಲಿ ತಾಲಿಬಾನ್ ಭರವಸೆ ನೀಡಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆಯ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳುವುದು, ಅವರ ಸುರಕ್ಷತೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮಾತ್ರವಲ್ಲ ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನ್ ಅಲ್ಪಸಂಖ್ಯಾತರ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

- Advertisement -