ಕೈಪಂಪಿನಿಂದ ನೀರು ಕೊಟ್ಟು ನಾಯಿಮರಿಯ ಬಾಯಾರಿಕೆ ನೀಗಿಸಿದ ಪುಟ್ಟ ಬಾಲಕ!

Prasthutha|

ಹೊಸದಿಲ್ಲಿ: ದೈನಂದಿನ ಜೀವನದಲ್ಲಿ ನಾವು ಅನೇಕ ಹೃದಯ ಸ್ಪರ್ಶಿ ದೃಶ್ಯಗಳನ್ನು ನೋಡುತ್ತೇವೆ. ಸಹಾನುಭೂತಿಯ ಕಾರ್ಯಗಳನ್ನು ನೋಡಲು ಅಥವಾ ಮಾಡಲು ಹಲವರು ಇಷ್ಟಪಡುತ್ತಾರೆ.

ಅಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

- Advertisement -

ಜನರು ಸಹಾನುಭೂತಿ ಮತ್ತು ದಯೆಯನ್ನು ಹೊಂದಲು ಪ್ರೇರೇಪಿಸುವ ಅತ್ಯಂತ ಸುಂದರವಾದ ವೀಡಿಯೊ ಇದಾಗಿದೆ. ಕೇವಲ 24 ಸೆಕೆಂಡ್‌ಗಳ ವೀಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ಕೈ ಪಂಪ್‌ನಿಂದ ನೀರು ತೆಗೆಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

ಹ್ಯಾಂಡ್ ಪಂಪ್‌ನ ಕೈ ಎತ್ತರವಾಗಿರುವುದರಿಂದಾಗಿ ಮಗುವಿಗೆ ಅದರ ಹ್ಯಾಂಡಲ್ ಅನ್ನು ಹೆಚ್ಚು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಆದರೆ,ಆ ಮಗು ಕೈ ಪಂಪ್ ಮೂಲಕ ನಾಯಿಮರಿಗೆ ಸಾಧ್ಯವಾದಷ್ಟು ನೀರು ಕೊಡಲು ಪ್ರಯತ್ನಿಸುತ್ತಿದ್ದಾನೆ. ಈ ವೀಡಿಯೋದಲ್ಲಿ ನಾಯಿಮರಿ ಕೈ ಪಂಪ್‌ ನ ಕೆಳಭಾಗದಿಂದ ನೀರು ಕುಡಿಯುವುದನ್ನು ಕಾಣಬಹುದು.

- Advertisement -

ಬಾಯಾರಿದ ನಾಯಿಮರಿಗೆ ಕೈ ಪಂಪ್ ಮೂಲಕ ನೀರು ಕುಡಿಸುವ ಮಗುವಿನ ವೀಡಿಯೋ ಜನಮನ ಗೆದ್ದಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp