ಭಾರತೀಯ ರಾಯಭಾರ ಕಚೇರಿಯ ನೆರವು ಸಿಗಲಿಲ್ಲ; ಉಕ್ರೇನ್ ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿಯ ಕುಟುಂಬ ಆರೋಪ

Prasthutha|

ನವದೆಹಲಿ: ಉಕ್ರೇನ್ ನಲ್ಲಿ ತಮ್ಮ ಮಗನಿಗೆ ಗುಂಡು ತಗುಲಿದ ವಿಚಾರ ತಿಳಿದು ಭಾರತೀಯ ವಿದ್ಯಾರ್ಥಿ ಹರ್ಜೋತ್ ಸಿಂಗ್ ಅವರ ಕುಟುಂಬ, ಎರಡು ದಿನಗಳ ಹಿಂದೆ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರೂ ನೆರವು ಸಿಗಲಿಲ್ಲ ಎಂದು ಹೇಳಿದೆ.

- Advertisement -

ತಮ್ಮ ಮಗನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕೆಂದೂ ತಕ್ಷಣಹಿಂದಿರುಗಿಸಲು ವ್ಯವಸ್ಥೆ ಮಾಡಬೇಕೆಂದೂ ಹರ್ಜೋತ್ ಸಿಂಗ್ ಕುಟುಂಬವು ಒತ್ತಾಯಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಜೋತ್ ಸಿಂಗ್ ಕುಟುಂಬದವರು ‘ಹರ್ಜೋತ್ ಅವರ ದೇಹದ ನಾಲ್ಕು ಭಾಗಗಳಿಗೆ ಗುಂಡು ತಗುಲಿದ್ದು, ಒಂದು ಗುಂಡು ಅವನ ದೇಹದ ಒಳ ಹೊಕ್ಕಿದೆ. ಭಾರತದ ಉಕ್ರೇನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿದಾಗ ಆಸ್ಪತ್ರೆಯಲ್ಲಿ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಹೇಳಿದರು.

- Advertisement -

ಫೆಬ್ರವರಿ 27 ರಂದು ಕೀವ್ ನಿಂದ ಸುರಕ್ಷಿತ ವಲಯಕ್ಕೆ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಹರ್ಜೋತ್ ಗೆ ಗುಂಡು ತಗುಲಿದ್ದು ಭುಜ ಮತ್ತು ಕಾಲಿಗೆ ಗಾಯಗಳಾಗಿವೆ. ಪ್ರಸ್ತುತ ಕೀವ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರ್ಜೋತ್ ಭಾರತೀಯ ರಾಯಭಾರ ಕಚೇರಿಯನ್ನು ಹಲವು ಬಾರಿ ಸಂಪರ್ಕಿಸಿದರೂ ರಾಯಭಾರ ಕಚೇರಿ ಸಹಾಯ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.

 ವಿವಾದವನ್ನು ಭಯಪಟ್ಟಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹರ್ಜೋತ್ ಸಿಂಗ್ ಅವರ ಚಿಕಿತ್ಸೆಯ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಹೇಳಿದೆ. ರಾಯಭಾರ ಕಚೇರಿ ಅವನನ್ನು ತಲುಪಲು ಪ್ರಯತ್ನಿಸುತ್ತಲೇ ಇದ್ದು ಸಂಘರ್ಷ ವಲಯವಾಗಿರುವುದರಿಂದ, ತಲುಪುವುದು ಕಷ್ಟ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆದಷ್ಟು ಬೇಗ ಅಲ್ಲಿಗೆ ಹೋಗುವ ಭರವಸೆ ನೀಡಿದೆ.

Join Whatsapp