ಕದನ ವಿರಾಮ ಘೋಷಿಸಿದ ರಷ್ಯಾ: ಉಕ್ರೇನ್ ನಿಂದ ನಾಗರಿಕರ ತೆರವಿಗೆ ಮಾನವೀಯ ದೃಷ್ಟಿಯಲ್ಲಿ ಈ ನಿರ್ಧಾರ ಎಂದ ಪುಟಿನ್

Prasthutha|

ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿ ಭಾಗಶಃ ಕೈವಶಪಡಿಸಿಕೊಂಡಿರುವ ರಷ್ಯಾ ಶನಿವಾರ ತಾತ್ಕಾಲಿಕ ಯುದ್ಧ ವಿರಾಮ ಘೋಷಿಸಿದೆ.

- Advertisement -

ಯುದ್ಧ ಘೋಷಣೆ ಮಾಡಿ 11 ದಿನಗಳ ಬಳಿಕ ರಷ್ಯಾ ಈ ನಿರ್ಧಾರವನ್ನು ಇಂದು ಬೆಳಗ್ಗೆ 6 ಗಂಟೆಗೆ ಘೋಷಿಸಿದೆ.

ನಾಗರಿಕರನ್ನು ತೆರವುಗೊಳಿಸಲು ಅನುಕೂಲವಾಗುವಂತೆ ಮಾನವೀಯ ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ರಷ್ಯಾ ತಿಳಿಸಿದೆ. ಉಭಯ ದೇಶಗಳ ನಡುವೆ 2 ಸುತ್ತಿನ ಮಾತುಕತೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

- Advertisement -

ಎಷ್ಟು ಗಂಟೆಗಳ ಕಾಲ ಕದನ ವಿರಾಮ ಜಾರಿಯಲ್ಲಿ ಇರಲಿದೆ ಎಂಬುದನ್ನು ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟಪಡಿಸಿಲ್ಲ. ಇದರಿಂದಾಗಿ ಉಕ್ರೇನ್  ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರಿಗೆ ಸುರಕ್ಷಿತ ತೆರವಿಗೆ ಸಹಾಯವಾಗಲಿದೆ.

Join Whatsapp