ಹೆಚ್ಚುತ್ತಿರುವ ಹಲಾಲ್ ಅನುಸರಣೆ ಪ್ರಕ್ರಿಯೆ; ಉತ್ಪನ್ನಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಮುಂದಾದ ರಫ್ತುದಾರರು

Prasthutha|

ಹೈದರಾಬಾದ್: ಉತ್ಪನ್ನದಲ್ಲಿ ಹಂದಿ ಮಾಂಸ ಬೆರೆತಿದೆಯೇ, ಇಲ್ಲವೇ ಎಂಬುದನ್ನು ಪ್ರಮಾಣೀಕರಿಸಲು ರಾಷ್ಟ್ರೀಯ ಮಾಂಸ ಸಂಶೋಧನಾ ಕೇಂದ್ರದಲ್ಲಿ(ಎನ್ಆರ್ಸಿಎಂ) ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

- Advertisement -


ಮಾಂಸ ಮತ್ತು ಮಾಂಸದ ಉತ್ಪನ್ನಗಳಿಗೆ ಹಲಾಲ್ ಅನುಸರಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದ್ ನ ರಫ್ತುದಾರರು ಈಗ ತಮ್ಮ ಉತ್ಪನ್ನಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.


ಮಲೇಷಿಯಾ ಮತ್ತು ಇಂಡೋನೇಷ್ಯಾದಂತಹ ಕೆಲವು ದೇಶಗಳಿಗೆ ಮಾಂಸಾಹಾರ ಅಥವಾ ಆಹಾರೇತರ (ಸೌಂದರ್ಯವರ್ಧಕಗಳು) ಉತ್ಪನ್ನಗಳ ರಫ್ತಿಗೆ ಹಲಾಲ್ ಪ್ರಮಾಣೀಕರಣದ ಅಗತ್ಯವಿದ್ದು, ಸಾಮಾನ್ಯವಾಗಿ ಉತ್ಪನ್ನಗಳ ಹಲಾಲ್ ಪರೀಕ್ಷೆಯನ್ನು ಧಾರ್ಮಿಕ ಕೇಂದ್ರಗಳು ಕೆಲವು ನಿಯಮಾವಳಿಗಳ ಅನುಸಾರ ನಡೆಸಲಾಗುತ್ತದೆ.

- Advertisement -


ಈ ಬಗ್ಗೆ ಪ್ರತಿಕ್ರಿಯಿಸಿರುವ NRCM ವಿಜ್ಞಾನಿ ವಿಷ್ಣುರಾಜ್ ಎಂ ಆರ್ ತಮ್ಮ ಪ್ರಯೋಗಾಲಯವು ಹಲಾಲ್ ದೃಢೀಕರಿಸಲು (ಎನ್ಎಬಿಎಲ್) ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿಯ ಮಾನ್ಯತೆ ಪಡೆದಿದೆ. ಲ್ಯಾಬ್ ನಲ್ಲಿ ಯಾವುದೇ ಉತ್ಪನ್ನದಲ್ಲಿ ಹಂದಿಮಾಂಸ ಸೇರಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಬಹುದು. ನಮ್ಮ ವರದಿಗಳು ಜಾಗತಿಕವಾಗಿ ಸ್ವೀಕಾರಾರ್ಹವಾಗಿವೆ ಎಂದು ಹೇಳಿದ್ದಾರೆ.


ನಮ್ಮ ಪ್ರಯೋಗಾಲಯದಲ್ಲಿ ದೃಢೀಕರಿಸಿದ ಬಳಿಕ ಆ ಪ್ರಮಾಣಪತ್ರವನ್ನು ಇಟ್ಟುಕೊಂಡು ರಫ್ತುದಾರರು ತಮ್ಮ ಉತ್ಪನ್ನಗಳು ಹಲಾಲ್ ಉತ್ಪನ್ನವೆಂದು ಮಾರಾಟ ಮಾಡಲು ಬಳಸಬಹುದು ಎಂದು ಅವರು ತಿಳಿಸಿದ್ದಾರೆ.

Join Whatsapp