ಸಮಾನ ನಾಗರಿಕ ಸಂಹಿತೆ ಬಗ್ಗೆ ಕಂಗನಾ ಟ್ವೀಟ್ ಮತ್ತು ಊರ್ಪಿ ಜಾವೇದ್ ತಿರುಗೇಟು

Prasthutha|

ಮುಂಬೈ: 2021ರ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ವಿವಾದದ ಟ್ವೀಟ್ ಮಾಡಿದ ಬಳಿಕ ನಟಿ ಕಂಗನಾ ರನೌತ್ ಅವರ ಟ್ವೀಟರ್ ಖಾತೆ ಅಮಾನತಾಗಿತ್ತು. ಆದರೆ ಇತ್ತೀಚೆಗೆ ಪುನಾರಂಭಗೊಂಡಿದೆ.

- Advertisement -


ಶಾರೂಕ್ ಖಾನ್ ಅವರ ಬ್ಲಾಕ್ ಬಸ್ಟರ್ ಚಿತ್ರ ಪಠಾಣ್ ಬಗ್ಗೆ ಕಂಗನಾ ಮಾಡಿದ ಟ್ವೀಟ್ ಭಾರೀ ವೈರಲ್ ಆಗಿದ್ದು, ಟ್ವೀಟ್ ಯುದ್ಧಕ್ಕೆ ದಾರಿ ಮಾಡಿತ್ತು. ಅದರಲ್ಲೂ ನಟಿ ಮಾಡೆಲ್ ಊರ್ಪಿ ಜಾವೇದ್ ಟ್ವೀಟ್ ಗಳು ಹೆಚ್ಚು ವೈರಲ್ ಆಗಿದ್ದವು.


ಹಿಂದೂ ಮುಸ್ಲಿಂ ಇಬ್ಬರೂ ಸಮಾನರಾಗಿ ಶಾರೂಕ್ ಅವರನ್ನು ಪ್ರೀತಿಸುತ್ತಾರೆ. ಭಾರತವು ಸೂಪರ್ ಜಾತ್ಯತೀತ ಎಂದು ಕಂಗನಾ ಪೋಸ್ಟ್ ಮಾಡಿದ್ದರು.
“ಅತ್ಯುತ್ತಮ ವಿಶ್ಲೇಷಣೆ. ಈ ದೇಶವು ಎಲ್ಲ ಖಾನ್’ಗಳನ್ನೇ ಪ್ರೀತಿಸಿದ ಕಾಲವಿತ್ತು; ಈಗ ಒಬ್ಬ ಖಾನ್’ರನ್ನೇ ಪ್ರೀತಿಸುವ ಕಾಲ. ಖಾನ್ ಅವರ ಗೀಳು ಹಿಡಿದಿದೆ. ಹೀಗಿರುವಾಗ ಭಾರತವನ್ನು ದ್ವೇಷದ ಫ್ಯಾಶಿಸ್ಟ್ ದೇಶ ಎನ್ನುವುದು ತಪ್ಪು. ಭಾರತದಂತಹ ದೇಶ ಜಗತ್ತಿನಲ್ಲಿ ಎಲ್ಲೂ ಇಲ್ಲ” ಎಂದು ಕಂಗನಾ ಅವರು ಬಾಲಿವುಡ್ ನಿರ್ಮಾಪಕರ ಪೋಸ್ಟ್’ಗೆ ಕಾಮೆಂಟ್ ಮಾಡಿದ್ದಾರೆ.
“ಓ ಮೈ ಗೋಶ್! ಏನಿದು ಮುಸ್ಲಿಂ ನಟ-ನಟಿಯರು ಹಿಂದೂ ನಟ-ನಟಿಯರು; ಕಲೆಯನ್ನು ಧರ್ಮದಿಂದ ವಿಭಜಿಸಲಾಗದು, ಇಲ್ಲಿರುವುದು ಬರೇ ನಟ-ನಟಿಯರು” ಎಂದು ಊರ್ಪಿ ಜಾವೇದ್ ಕಂಗನಾ ಪೋಸ್ಟ್’ಗೆ ತಿರುಗೇಟು ನೀಡಿದ್ದಾರೆ.

- Advertisement -


ಬಹಿರಂಗವಾಗಿ ಪ್ರಧಾನಿ ಮೋದಿಯವರ ಬೆಂಬಲಿಗರಾಗಿರುವ ಕಂಗನಾ ರನೌತ್ ಅದಕ್ಕೆ ಉತ್ತರಿಸಿದ್ದು ಹೀಗೆ.
“ನಿಜ, ನನ್ನ ಪ್ರೀತಿಯ ಊರ್ಪಿ, ಎಲ್ಲ ನಟ-ನಟಿಯರು ಸರಿ ಆದರೆ ಅದಕ್ಕೆ ಸಮಾನ ನಾಗರಿಕ ಸಂಹಿತೆ ಬರಬೇಕು. ಅಲ್ಲಿಯವರೆಗೆ ಈ ದೇಶವು ವಿಭಜನೆಯದಾಗಿಯೇ ಇರುತ್ತದೆ. ಸಂವಿಧಾನವೂ ಅದೇ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರೆ ನಾವೀಗ ಸಮಾನ ನಾಗರಿಕ ಸಂಹಿತೆಗಾಗಿ ಒತ್ತಾಯ ಮಾಡಬಹುದಲ್ಲವೆ?” ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.
“ಸಮಾನ ಗಾಯ ಎಂಬುದು ತುಂಬ ಕೆಟ್ಟದು ಮೇಡಂ, ನಾನು ಪ್ರಸಿದ್ಧಳಾಗಿರುವುದು ನನ್ನ ಬಟ್ಟೆಗಳಿಂದ” ಎಂದು ಊರ್ಪಿ ಜಾವೇದ್ ಅವರು ಕಂಗಾನಾರಿಗೆ ಉತ್ತರಿಸಿದ್ದಾರೆ. ಊರ್ಪಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಫ್ಯಾಶನ್ ಉಡುಗೆಗಳಿಂದಲೇ ಖ್ಯಾತಿಗೆ ಬಂದವರು.


ಇದಕ್ಕೆ ಇಕ್ಕಡೆ ಹಲವು ಪ್ರತಿಕ್ರಿಯೆಗಳು ಬಂದವು. ಇದೂ ಒಂದು ಫನ್ ಗೇಮ್ ಎಂದು ಪ್ರತಿಕ್ರಿಯೆ ಸಾಗಿತು.
ಪಠಾಣ್ ಬಗ್ಗೆ ಕಂಗನಾ ಮಾಡಿದ ಪೋಸ್ಟ್ ಕೂಡ ಅಲ್ಪ ವಿವಾದ ಸೃಷ್ಟಿಸಿದೆ.
“ಭಾರತೀಯ ಮುಸ್ಲಿಮರು ದೇಶಪ್ರೇಮಿಗಳು ಅಫಘಾನಿಸ್ತಾನದ ಪಠಾಣರಿಗಿಂತ ತುಂಬ ವಿಭಿನ್ನರು. ಭಾರತವು ಎಂದೂ ಅಫಘಾನಿಸ್ತಾನವಲ್ಲ ಎನ್ನುವುದೇ ತಿರುಳು. ಅಫಘಾನಿಸ್ತಾನದಲ್ಲಿ ಏನಾಗುತ್ತಿದೆ ಎನ್ನುವುದನ್ನು ನಾವೆಲ್ಲ ತಿಳಿದಿದ್ದೇವೆ. ಅಲ್ಲಿ ನರಕದ ಕೆಳಕ್ಕೆ ಇಳಿಯಲಾಗಿದೆ. ಕತೆಯನ್ನು ನೋಡಿದರೆ ಪಠಾಣ್ ಚಿತ್ರದ ಹೆಸರನ್ನು ಇಂಡಿಯನ್ ಪಠಾಣ್ ಎಂದು ಇಡಬೇಕಾಗಿತ್ತು.” ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

Join Whatsapp