ನೆನಪಿನ ಶಕ್ತಿ ಕಳೆದುಕೊಂಡ ಬೈಡನ್‌ ವಜಾಗೊಳಿಸಿ: ಕಮಲಾ ಹ್ಯಾರಿಸ್‌ಗೆ ಅಟಾರ್ನಿ ಜನರಲ್ ಪತ್ರ

Prasthutha|

ವಾಶಿಂಗ್‌ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆಂದೂ, ಅವರರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದೂ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೈಡನ್ ದೇಶದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವುದು ಕಷ್ಟ ಎಂದು ವೆಸ್ಟ್ ವರ್ಜೀನಿಯಾ ಅಟಾರ್ನಿ ಜನರಲ್ ಪ್ಯಾಟ್ರಿಕ್ ಮೊರಿಸೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮೊರಿಸೆ, ಬೈಡನ್​ರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ ಎಂದು ವರದಿಯಾಗಿದೆ.

- Advertisement -

ಇತ್ತೀಚಿನ ಸಭೆಗಳಲ್ಲಿ ದೇಶಗಳ ಹೆಸರುಗಳ ಬಗ್ಗೆ ತಪ್ಪಾದ ಮಾತುಗಳನ್ನಾಡಿದ್ದರು. ಅಮೆರಿಕನ್ನರು ಬೈಡನ್ ಅವರಲ್ಲಿನ ಬದಲಾವಣೆಯನ್ನು ಬಹಳ ಸಮಯದಿಂದ ಗಮನಿಸುತ್ತಿದ್ದಾರೆ. ಇದು ಸಾರ್ವಜನಿಕ ಸಭೆಗಳಲ್ಲಿ ಮತ್ತು ವಿದೇಶಿ ನಾಯಕರೊಂದಿಗಿನ ಸಭೆಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಹೀಗಾಗಿ ಅವರು ಅಧ್ಯಕ್ಷರಾಗಿ ಮುಂದುವರಿಯಲು ಅನರ್ಹರು ಎಂದು ಮೊರಿಸೆ ವಿವರಿಸಿದ್ದಾರೆ.

ಹಿರಿಯ ನಾಯಕರು ಸಹ ಬೈಡನ್ ಅವರ ವಯಸ್ಸನ್ನು ಟೀಕಿಸುತ್ತಿದ್ದಾರೆ. 25ನೇ ತಿದ್ದುಪಡಿಯನ್ನು ಜಾರಿಗೊಳಿಸುವ ಮೂಲಕ ಅಧ್ಯಕ್ಷ ಸ್ಥಾನದಿಂದ ಅವರನ್ನು ತೆಗೆದುಹಾಕಬೇಕಿದೆ. ಇದಕ್ಕೆ ತಾವು ಮಾನಸಿಕವಾಗಿ ಸದೃಢರಾಗುವ ಅಗತ್ಯವಿದೆ ಎಂದು ಪತ್ರದಲ್ಲಿ ಅಟಾರ್ನಿ ಜನರಲ್ ತಿಳಿಸಿದ್ದಾರೆ.

- Advertisement -

ಮಾಜಿ ಅಧ್ಯಕ್ಷ ಕೆನಡಿಯವರ ಹತ್ಯೆಯ ನಂತರ 1965 ರಲ್ಲಿ ಕಾಂಗ್ರೆಸ್ 25 ನೇ ತಿದ್ದುಪಡಿಯನ್ನು ಅಂಗೀಕರಿಸಿದೆ. ಇದರ ಪ್ರಕಾರ, ಅಧ್ಯಕ್ಷರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಲ್ಲ ಎಂದು ಉಪಾಧ್ಯಕ್ಷರು ಮತ್ತು ಸಚಿವ ಸಂಪುಟದ ಸದಸ್ಯರು ಭಾವಿಸಿದರೆ, ಅವರನ್ನು ಅಧಿಕಾರದಿಂದ ತೆಗೆದುಹಾಕುವ ಅಧಿಕಾರವಿದೆ ಎಂದು ಮೊರಿಸೆ ಪತ್ರದಲ್ಲಿ ನಪಿಸಿದ್ದಾರೆ.

ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಬಿಡೆನ್ ಅವರ ಸ್ಮರಣೆಯಲ್ಲಿ ಅನೇಕ ದೋಷಗಳು ಪತ್ತೆಯಾಗಿವೆ ಎಂದು ಇತ್ತೀಚಿನ ವರದಿ ಬಹಿರಂಗಪಡಿಸಿದೆ ಎಂದು ವರದಿಯಾಗಿದೆ.

Join Whatsapp