‘ಧ್ವಂಸಗೊಳಿಸಲ್ಪಟ್ಟ ಮನೆ ಜಾವೇದ್ ಮುಹಮ್ಮದ್ ರಿಗೆ ಸೇರಿದ್ದಲ್ಲ’

Prasthutha|

ಲಕ್ನೋ: ಪ್ರವಾದಿ ನಿಂದನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂಬ ನೆಪವೊಡ್ಡಿ ಯುಪಿ ಪೊಲೀಸರು ಧ್ವಂಸಗೊಳಿಸಿದ ಮನೆ ಜಾವೇದ್ ಮುಹಮ್ಮದ್ ಅವರಿಗೆ ಸೇರಿದ್ದಲ್ಲ, ಬದಲಾಗಿ ಅದು ಅವರ ಪತ್ನಿಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿ ಎಂಬುದು ಬೆಳಕಿಗೆ ಬಂದಿದೆ.

- Advertisement -

ಪ್ರವಾದಿ ನಿಂದನೆ ವಿರುದ್ಧ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಳಿಕ, ಹಿಂಸಾಚಾರದ ಸೂತ್ರಧಾರ ಎಂದು ಆರೋಪಿಸಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ನಾಯಕ ಜಾವೇದ್ ಮುಹಮ್ಮದ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ. ಆದರೆ, ಅಧಿಕಾರಿಗಳು ಧ್ವಂಸಗೊಳಿಸಿದ ಮನೆ ಅವರಿಗೆ ಸೇರಿದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ಜೆಎನ್ ಯು ವಿದ್ಯಾರ್ಥಿ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಅವರ ತಂದೆಯಾಗಿರುವ ಜಾವೇದ್ ಮುಹಮ್ಮದ್ ರನ್ನು ಇತರ 10 ಮಂದಿಯೊಂದಿಗೆ ಹಿಂಸಾಚಾರದ ಪ್ರಮುಖ ಸಂಚುಕೋರ ಎಂದು ಯುಪಿ ಪೊಲೀಸರು ಹೆಸರಿಸಿದ್ದಾರೆ.

- Advertisement -

  ಹಿಂದಿನ ದಿನಾಂಕದ ನೋಟಿಸ್ ಅನ್ನು ಜಾವೇದ್ ಮುಹಮ್ಮದ್ ಹೆಸರಿನಲ್ಲಿ ನೀಡಲಾಗಿದೆ, ಆದರೆ ಮನೆ ಕೇವಲ ಅವರ ಪತ್ನಿಗೆ ಸೇರಿದ್ದಾಗಿದೆ. ಅದರ ಜಮೀನು ಜಾವೇದ್ ಅವರ ಪತ್ನಿಯ ಪೂರ್ವಜರ ಆಸ್ತಿ, ಜಾವೇದ್ ಮುಹಮ್ಮದ್ ಅದರಲ್ಲಿ ಯಾವುದೇ ಕಾನೂನು ಪಾಲನ್ನು ಹೊಂದಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.



Join Whatsapp