ಪ್ರಧಾನಿ ಮೋದಿ ಒತ್ತಡಕ್ಕೆ ಮಣಿದು ಶ್ರೀಲಂಕಾದಲ್ಲಿ ಅದಾನಿಗೆ ಗುತ್ತಿಗೆ: ಅಧಿಕಾರಿ ರಾಜೀನಾಮೆ

Prasthutha|

ನವದೆಹಲಿ: ಶ್ರೀಲಂಕಾದಲ್ಲಿ ಇಂಧನ ಯೋಜನೆಯ ಗುತ್ತಿಗೆಯನ್ನು ಗೌತಮ್ ಅದಾನಿ ಸಮೂಹಕ್ಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡಕ್ಕೆ ಮಣಿದು ಅಧ್ಯಕ್ಷ ಗೋತಬಯ ರಾಜಪಕ್ಷೆ ಅವರು ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದ ಲಂಕಾ ಅಧಿಕಾರಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಶ್ರೀಲಂಕಾದ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ (ಸಿಇಬಿ) ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ಪ್ರತಿಕ್ರಿಯಿಸಿ, ಪವನ ವಿದ್ಯುತ್ ಯೋಜನೆಯನ್ನು ನೇರವಾಗಿ ಅದಾನಿ ಗ್ರೂಪ್’ಗೆ ನೀಡುವಂತೆ ಪ್ರಧಾನಿ ಮೋದಿ ಒತ್ತಡ ಹೇರಿರುವುದನ್ನು ರಾಜಪಕ್ಷೆ ಒಪ್ಪಿರುವುದಾಗಿ ತಿಳಿಸಿದ್ದರು. ಸಂಸದೀಯ ಸಮಿತಿಯಾದ ಸಾರ್ವಜನಿಕ ಉದ್ದಿಮೆಗಳ ಸಮಿತಿಯ ಬಹಿರಂಗ ವಿಚಾರಣೆಯಲ್ಲಿ ಅವರು ಈ ಆರೋಪ ಮಾಡಿದ್ದರು.

ಮೋದಿಯವರ ಒತ್ತಡಕ್ಕೆ ಮಣಿದು ಅಧ್ಯಕ್ಷ ರಾಜಪಕ್ಷೆ ಈ ಯೋಜನೆಯನ್ನು ಅದಾನಿ ಗ್ರೂಪಿಗೆ ನೀಡಿರುವುದನ್ನು ಫರ್ಡಿನಾಂಡೋ ಅವರು ಸಮಿತಿಗೆ ತಿಳಿಸಿದ್ದರು. ಇದಾದ ಮೂರು ದಿನಗಳ ಬಳಿಕ ಫರ್ಡಿನಾಂಡೋ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

- Advertisement -

2021 ರಲ್ಲಿ ಅದಾನಿ ಗ್ರೂಪ್ ಆಯಕಟ್ಟಿನ ಕೊಲಂಬೊ ಬಂದರಿನ ವೆಸ್ಟ್ ಇಂಟರ್ನ್ಯಾಷನಲ್ ಕಂಟೈನರ್ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲು ಮತ್ತು ನಡೆಸಲು ಸರ್ಕಾರಿ ಶ್ರೀಲಂಕಾ ಬಂದರುಗಳ ಪ್ರಾಧಿಕಾರದೊಂದಿಗೆ (SLPA) $700 ಮಿಲಿಯನ್ ಒಪ್ಪಂದಕ್ಕೆ ಸಹಿ ಹಾಕಿತ್ತು.

Join Whatsapp