ಮಥುರಾ ಶಾಹೀ ಮಸೀದಿಯನ್ನು ಧ್ವಂಸಗೊಳಿಸಿದರೆ ನಾವೇ ಪರ್ಯಾಯ ಭೂಮಿ ನೀಡುತ್ತೇವೆ : ಹಿಂದೂ ಸಂಘಟನೆ ಹೇಳಿಕೆ

Prasthutha|

ಮಥುರಾ: ಕಾಶಿಯಲ್ಲಿರುವ ಶಾಹೀ ಈದ್ಗಾ ಮಸೀದಿಯನ್ನು ಶ್ರೀ ಕೃಷ್ಣ ಜನ್ಮ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸಿರುವ ಹಿಂದೂ ಸಂಘಟನೆಯೊಂದು ಮಸೀದಿಯ ಆಡಳಿತ ಸಮಿತಿಯು ತಾವೇ ಈದ್ಗಾ ಮಸೀದಿಯನ್ನು ನೆಲಸಮ ಮಾಡಲು ಒಪ್ಪಿದರೆ ಮಸೀದಿ ಈಗ ನೆಲೆನಿಂತಿರುವ ಭೂಮಿಗಿಂತ ಬೇರೆ ಕಡೆ ಹೆಚ್ಚಿನ ಭೂಮಿಯನ್ನು ನೀಡುವುದಾಗಿ ಮಥುರಾ ನ್ಯಾಯಾಲಯಕ್ಕೆ ತಿಳಿಸಿದೆ.

- Advertisement -

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯು ಮಥುರಾ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ಅರ್ಜಿಯಲ್ಲಿ ಸಲ್ಲಿಸಿದ್ದು, ಮಸೀದಿಯನ್ನು ಕೆಡವಿದರೆ ಮಸೀದಿ ನೆಲೆ ನಿಂತಿರುವ ಭೂಮಿಯನ್ನು ಬಿಟ್ಟು, ಹೊರ ಭಾಗದಲ್ಲಿ ಮಸೀದಿ ನಿರ್ಮಿಸಲು ಹೆಚ್ಚಿನ ಭೂಮಿ ನೀಡುತ್ತೇವೆ ಎಂದು ತಿಳಿಸಿದೆ.

ಆಡಳಿತ ಸಮಿತಿಯು ಸ್ವಯಂಪ್ರೇರಣೆಯಿಂದ ಮಸೀದಿಯನ್ನು ನೆಲಸಮಗೊಳಿಸಿ, ಭೂಮಿಯನ್ನು ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಗೆ ಬಿಟ್ಟುಕೊಟ್ಟರೆ, ಮಸೀದಿ ಇರುವ ಜಾಗಕ್ಕಿಂತ ದೊಡ್ಡದಾದ ಭೂಮಿಯನ್ನು ನೀಡುತ್ತೇವೆ ಎಂದು ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

- Advertisement -

.

Join Whatsapp