ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ | ಆರೋಪಿಗಳ ವಿಚಾರಣೆಯನ್ನು ಗುಜರಾತ್ ಸರ್ಕಾರ ತಡೆಯುತ್ತಿದೆ ಎಂದ ಸಿಬಿಐ

Prasthutha|

ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿಗಳಾದ ಮೂವರು ಪೊಲೀಸರನ್ನು ಪ್ರಶ್ನಿಸಲು ಗುಜರಾತ್ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಸಿಬಿಐ ಹೇಳಿದೆ. ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳಾದ ಜಿಎಲ್ ಸಿಂಘಾಲ್, ತರುಣ್ ಬರೋತ್ ಮತ್ತು ಅನಾಜು ಚೌಧರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

- Advertisement -

ಜೂನ್ 2004 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ‘ಎನ್‌ಕೌಂಟರ್’‌ನಲ್ಲಿ ಇಶ್ರತ್ ಜಹಾನ್ ಮತ್ತು ಇತರ ಮೂವರು ಸಾವನ್ನಪ್ಪಿದ್ದರು. ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ ಉಗ್ರರನ್ನು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ ಹೈಕೋರ್ಟ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಇದೊಂದು ನಕಲಿ ಎನ್‌ಕೌಂಟರ್ ಎಂದು ಹೇಳಿತ್ತು. ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು.

ನಕಲಿ ಎನ್‌ಕೌಂಟರ್ ಗೆ ಸಂಬಂಧಿಸಿದಂತೆ ಅಹಮದಾಬಾದ್ ಅಪರಾಧ ವಿಭಾಗದ ಸಹಾಯಕ ಆಯುಕ್ತ ಜಿ.ಎಲ್ ಸಿಂಘಾಲ್ ಅವರನ್ನು ಸಿಬಿಐ 2013 ರಲ್ಲಿ ಬಂಧಿಸಿತ್ತು. ಆದರೆ ತಿಂಗಳುಗಳ ನಂತರ ಬಿಡುಗಡೆಯಾದ ಸಿಂಘಾಲ್ ಅವರಿಗೆ ಡಿಐಜಿ ಆಗಿ ಬಡ್ತಿ ನೀಡಲಾಯಿತು.

Join Whatsapp