ಜರ್ಮನಿಯಲ್ಲಿರುವ ಪಾಕಿಸ್ತಾನದ ಕಾನ್ಸುಲೇಟ್‌ಗೆ ದಾಳಿ ನಡೆಸಿ ಧ್ವಜ ಇಳಿಸಿದ ಗುಂಪು

Prasthutha|

ಬರ್ಲಿನ್: ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿರುವ ಪಾಕಿಸ್ತಾನದ ಕಾನ್ಸುಲೇಟ್ ಕಚೇರಿಯ ಮೇಲೆ ಗುಂಪೊಂದು ದಾಳಿ ನಡೆಸಿದ್ದು, ಕಚೇರಿಯ ಕಟ್ಟಡದಲ್ಲಿದ್ದ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿದ ಘಟನೆ ವರದಿಯಾಗಿದೆ.

- Advertisement -

ಅಫ್ಘಾನಿಸ್ತಾನದ ಧ್ವಜವನ್ನು ಬೀಸುತ್ತಿದ್ದ ಕೆಲವರು ಪಾಕಿಸ್ತಾನದ ಕಾನ್ಸುಲೇಟ್‌‌ಗೆ ಕಲ್ಲೆಸೆದು, ಬಳಿಕ ಕಟ್ಟಡದಲ್ಲಿದ್ದ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ, ಅಲ್ಲಿ ಅಫ್ಘಾನಿಸ್ತಾನದ ಧ್ವಜವನ್ನು ಇರಿಸಿದ್ದಾರೆ.

ಅಷ್ಟೇ ಅಲ್ಲದೆ, ಪಾಕಿಸ್ತಾನದ ಧ್ವಜವನ್ನು ಸುಡಲು ಗುಂಪು ಪ್ರಯತ್ನಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಘಟನೆಯನ್ನು ಪಾಕಿಸ್ತಾನದ ವಿದೇಶಾಂಗ ಇಲಾಖೆ ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜರ್ಮನಿ ಸರಕಾರವನ್ನು ಆಗ್ರಹಿಸಿದೆ.

ಅಫ್ಘಾನಿಸ್ತಾನದ ಧ್ವಜವನ್ನು ಇರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.



Join Whatsapp