ಹನುಮ ಜಯಂತಿ ವೇಳೆ ಯುವಕನ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ಪಾಲಿಕೆ ಬಿಜೆಪಿ ಸದಸ್ಯೆಯ ಸಹೋದರ !

Prasthutha|

ಮೈಸೂರು: ಟಿ.ನರಸೀಪುರ ಪಟ್ಟಣದಲ್ಲಿ ಹನುಮ ಜಯಂತಿ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ವೇಣುಗೋಪಾಲ್ ನನ್ನು ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪ್ರಕರಣದ 4ನೇ ಆರೋಪಿ ನಗರಪಾಲಿಕೆ ಬಿಜೆಪಿ ಸದಸ್ಯೆಯ ಸಹೋದರ ನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಪ್ರ‍್ರಕರಣದ ನಾಲ್ಕನೇ ಆರೋಪಿ ಶಂಕರ್ ಅಲಿಯಾಸ್ ತುಪ್ಪಾ ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರ.


ಪ್ರಕರಣ ಸಂಬಂಧ ಸತ್ಯಶೋಧನೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿತ್ತು. ಪ್ರಕರಣದ ಆರೋಪಿಯೊಬ್ಬ ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆಯೊಬ್ಬರ ಸಹೋದರ ಎಂಬ ಸತ್ಯ ಬಹಿರಂಗವಾಗಿದೆ.

- Advertisement -

ಸೋಮವಾರ ಪ್ರಕರಣದ A1 ಮತ್ತು A2 ಆರೋಪಿಗಳಾದ ಮಣಿಕಂಠ ಅಲಿಯಾಸ್ ಕೊಳೆ ಮಣಿ, ಸಂದೇಶ್ ನನ್ನು ಪೊಲೀಸರು ಬಂಧಿಸಿದ್ದರು. ಇಂದು ನಾಲ್ವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.