ನೇಪಾಳ: 6 ಜನರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ

Prasthutha|

ಕಠ್ಮಂಡು: ಆರು ಜನರನ್ನು ಸೊಲುಖುಂಬುಗೆ ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿದೆ.

- Advertisement -


ಬೆಳಗ್ಗೆ 10ಕ್ಕೆ ಕಠ್ಮಂಡುವಿನಿಂದ ಹೊರಟ ಹೆಲಿಕಾಪ್ಟರ್ ಕೇವಲ 12 ನಿಮಿಷ ಹಾರಾಟ ನಡೆಸಿದ ನಂತರ ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿದೆ. ಕರೆ ಸಂಕೇತ 9ಎನ್ಎಂವಿಯಿಂದ ಯಾವುದೇ ಸಂಕೇತ ನಂತರ ಸಿಗಲಿಲ್ಲ ಎಂದು ಮಾಹಿತಿ ಅಧಿಕಾರಿ ಗ್ಯಾನೇಂದ್ರ ಭುಲ್ ತಿಳಿಸಿರುವುದಾಗಿ ಎಎನ್ ಐ ಟ್ವೀಟ್ ಮಾಡಿದೆ.


ನಾಪತ್ತೆಯಾಗಿರುವ ಹೆಲಿಕಾಪ್ಟರ್ನಲ್ಲಿ ಕ್ಯಾಪ್ಟನ್ ಹಾಗೂ ಐವರು ವಿದೇಶಿ ಪ್ರಜೆಗಳು ಸೇರಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಹಿರಿಯ ಪೈಲಟ್ ಚೆಟ್ ಗುರುಂಗ್ ಅವರು ಇದರ ಕ್ಯಾಪ್ಟನ್ ಆಗಿದ್ದರು ಎಂದು ವರದಿಯಾಗಿದೆ.

- Advertisement -


ಹೆಲಿಕಾಪ್ಟರ್ ನೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಪತ್ತೆಹಚ್ಚುವ ಪ್ರಯತ್ನಗಳು ಈಗಾಗಲೇ ನಡೆಯುತ್ತಿವೆ ಎಂದು ನೇಪಾಳದ ಮಾಧ್ಯಮಗಳು ವರದಿ ಮಾಡಿದೆ.