ಹತ್ಯೆಯಾದ ಮಸೂದ್, ಫಾಝಿಲ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ 30 ಲಕ್ಷ ರೂ. ಪರಿಹಾರ ವಿತರಣೆ

Prasthutha|

►ಪ್ರವೀಣ್ ಕುಟುಂಬಕ್ಕೂ ಪರಿಹಾರ: ಹಾಜಿ ಕೆ. ಎಸ್. ಮುಹಮ್ಮದ್ ಮಸೂದ್

- Advertisement -

ಮಂಗಳೂರು: ಇತ್ತೀಚೆಗೆ ಸಂಘಪರಿವಾರದಿಂದ ಹತ್ಯೆಯಾದ ಮಸೂದ್, ಫಾಝಿಲ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಚೆಕ್ ವಿತರಿಸಲಾಯಿತು.

ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರತೀ ಕುಟುಂಬಕ್ಕೂ 30 ಲಕ್ಷ ರೂಪಾಯಿಯಂತೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಸ್. ಮುಹಮ್ಮದ್ ಮಸೂದ್ ನೇತೃತ್ವದಲ್ಲಿ ಚೆಕ್ ವಿತರಿಸಿದರು.

- Advertisement -

ಪ್ರವೀಣ್ ಕುಟುಂಬಕ್ಕೂ ಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಕುಟುಂಬಸ್ಥರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಸದ್ಯದ ಪರಿಸ್ಥಿತಿ ಹಿನ್ನೆಲೆ ಕುಟುಂಬಸ್ಥರು ಭೇಟಿ ನಿರಾಕರಿಸಿದ್ದರಿಂದ ಮುಂದಿನ ದಿನಗಳಲ್ಲಿ ಪ್ರವೀಣ್ ಕುಟುಂಬಕ್ಕೂ ಪರಿಹಾರ ನೀಡಲಾಗುವುದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ. ಎಸ್. ಮುಹಮ್ಮದ್ ಮಸೂದ್ ಹೇಳಿದ್ದಾರೆ.



Join Whatsapp