ಹೊಸದಿಲ್ಲಿ: ಹೆಚ್ಚುತ್ತಿರುವ ಕೋವಿಡ್ ಪ್ರಕರಣ; ಮಾಸ್ಕ್ ಕಡ್ಡಾಯ

Prasthutha|

ನವದೆಹಲಿ: ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ  ₹ 500 ದಂಡ ವಿಧಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

- Advertisement -

ಖಾಸಗಿ ನಾಲ್ಕು ಚಕ್ರದ ವಾಹನಗಳಲ್ಲಿ ಪ್ರಯಾಣಿಸುವವವರಿಗೆ ಈ ದಂಡ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ

ಬುಧವಾರ, ದೆಹಲಿಯಲ್ಲಿ ಕೋವಿಡ್ ನಿಂದಾಗಿ 8 ಸಾವು ಸಂಭವಿಸಿವೆ. ಸುಮಾರು 180 ದಿನಗಳಲ್ಲೇ ಇದು ಅತ್ಯಧಿಕ ಸಾವಿನ ಸಂಖ್ಯೆಯಾಗಿದ್ದು, 2,146 ಹೊಸ ಪ್ರಕರಣಗಳು ಮತ್ತು ಶೇಕಡ 17.83 ರಷ್ಟು ದೈನಂದಿನ ಪಾಸಿಟಿವಿಟಿ ದರ ದಾಖಲಾಗಿದೆ. ಮಂಗಳವಾರ 2,495 ಪ್ರಕರಣಗಳು ವರದಿಯಾಗಿದ್ದವು.

- Advertisement -

ದೆಹಲಿ ಸರ್ಕಾರವು ಏಪ್ರಿಲ್ ನಲ್ಲಿ ಮಾಸ್ಕ್ ಕಡ್ಡಾಯ ಆದೇಶವನ್ನು ತೆಗೆದುಹಾಕಿತ್ತು. ಆದರೆ, ಇದೀಗ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ಮತ್ತು ಉಲ್ಲಂಘನೆಗೆ ದಂಡವನ್ನು ವಿಧಿಸಲು ಮತ್ತೆ ಆದೇಶಿಸಲಾಗಿದೆ.



Join Whatsapp