ನಿಷ್ಕ್ರಿಯಗೊಂಡ ಭಾರತದ ಆರ್ಥಿಕತೆ; ನಿರ್ಮಲಾ ಸೀತಾರಾಮನ್ ವಿರುದ್ಧ ಎಐಯುಡಿಎಫ್ ಮುಖ್ಯಸ್ಥ ವಾಗ್ದಾಳಿ

Prasthutha|

ಗುವಾಹಟಿ: ಆರ್ಥಿಕತೆಯ ಪ್ರಗತಿಗೆ ಅಡ್ಡಿಪಡಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್   ವಾಗ್ದಾಳಿ ನಡೆಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ  ಬದ್ರುದ್ದೀನ್ ಅಜ್ಮಲ್,   ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಗಮನಿಸಬೇಕು, ಇಲ್ಲದಿದ್ದರೆ ಹಣದುಬ್ಬರವು 2024 ರಲ್ಲಿ ತಮ್ಮ ಸರ್ಕಾರವನ್ನು ನುಂಗಿಹಾಕುತ್ತದೆ ಎಂದು ಎಐಯುಡಿಎಫ್ ಮುಖ್ಯಸ್ಥರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಹಣವು ಹಣಕಾಸು ಸಚಿವರ ಬಳಿ ಇದೆ. ಒಬ್ಬ ವ್ಯಕ್ತಿಯು ಖರೀದಿಸಲು ಎಷ್ಟು ಖರ್ಚು ಮಾಡುತ್ತಾನೆ ಎಂದು ಅವರು ಹೇಗೆ ತಿಳಿದುಕೊಳ್ಳುತ್ತಾರೆ? ಯಾವುದೇ ಸಚಿವರಿಗೆ ಹಣದುಬ್ಬರ ಕಾಣಿಸುವುದಿಲ್ಲ. ಬಿಜೆಪಿ ಸಂಸದರು ಅಡುಗೆ ಮನೆಯನ್ನು ಹೇಗೆ ನಡೆಸುತ್ತಿದ್ದೀರಿ ಎಂದು ತಮ್ಮ ಹೆಂಡತಿಯರನ್ನು ಕೇಳಬೇಕು. ಸರ್ಕಾರ ಗಮನಿಸಬೇಕು, ಇಲ್ಲದಿದ್ದರೆ ಹಣದುಬ್ಬರವು 2024 ರಲ್ಲಿ ಅವರ ಸರ್ಕಾರವನ್ನೇ ನುಂಗಿಹಾಕುತ್ತದೆ” ಎಂದು ಹೇಳಿದರು.

Join Whatsapp