ಶಹೀದ್ ಫಾಝಿಲ್ ಸ್ಮರಣಾರ್ಥ ದ.ಕ ಜಿಲ್ಲೆಯ ನಾಲ್ಕು ಕಡೆ ಆಗಸ್ಟ್ 7 ರಂದು ರಕ್ತದಾನ ಶಿಬಿರ: ಕರ್ನಾಟಕ ಬ್ಲಡ್ ಹೆಲ್ಪ್ ಲೈನ್

Prasthutha|

ಮಂಗಳೂರು: ಮರ್ಹೂಂ ಫಾಝಿಲ್ ಮಂಗಳಪೇಟೆ ರವರ ಸ್ಮರಣಾರ್ಥ ಜಿಲ್ಲೆಯ 4 ಕಡೆ ಏಕ ಕಾಲಕ್ಕೆ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

- Advertisement -


ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಆಗಸ್ಟ್ 7 ರಂದು ಆದಿತ್ಯವಾರ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30 ರವರೆಗೆ ಉಳ್ಳಾಲ, ಉಳಾಯಿಬೆಟ್ಟು, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ ನಡೆಯಲಿದೆ.


ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಹಲವಾರು ಜೀವಕ್ಕೆ ರಕ್ತವನ್ನು ಪೂರೈಸುವಂತಹ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸದಸ್ಯರಾದ ಮರ್ಹೂಂ ಫಾಝಿಲ್ ಮಂಗಳಪೇಟೆ ರವರ ಸ್ಮರಣಾರ್ಥ ಜಿಲ್ಲೆಯ 4 ಕಡೆ ಏಕ ಕಾಲಕ್ಕೆ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಜೀವದಾನಿಯಾಗಲು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆ ಮನವಿ ಮಾಡಿದೆ.

Join Whatsapp