ದೇಶದಲ್ಲಿ ಫ್ಯಾಶಿಸಂ’ನ ಕರಾಳತೆ ಅತೀ ಅಪಾಯಕಾರಿ ಹಂತ ತಲುಪಿದೆ: ಅನ್ವರ್ ಸಾದಾತ್ ಬಜತ್ತೂರು ಕಳವಳ

ಮಂಗಳೂರು: ದೇಶದಲ್ಲಿ ಫ್ಯಾಶಿಸಂ’ನ ಕರಾಳತೆ ಅತೀ ಅಪಾಯಕಾರಿ ಹಂತ ತಲುಪಿದೆ ಎಂದು SDPI ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದ ಫ್ಯಾಶಿಸ್ಟ್ ಅಜೆಂಡಾಗಳನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕರ ಮನೆಗಳಿಗೆ ಏಕಾಏಕಿ ದಾಳಿ ಮಾಡಿ ಹೋರಾಟಗಾರರನ್ನು ಬಂಧಿಸಿ, ಕೈಕೋಳ ತೊಡಿಸುವ ಮೂಲಕ ದೇಶದಲ್ಲಿ ಮತ್ತೊಂದು ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಿಸಿದೆ ಎಂದು ತಿಳಿಸಿದ್ದಾರೆ.

- Advertisement -

ಇತ್ತೀಚೆಗೆ ಸಾಮಾಜಿಕ ಸಂಘಟನೆಯಾದ PFI ಕಚೇರಿಗಳ ಮೇಲೆ ದಾಳಿ ನಡೆಸಿ, ಅವುಗಳ ನಾಯಕರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಅನ್ವರ್ ಸಾದಾತ್ ಅವರು ಈ ಮೇಲಿನ ಹೇಳಿಕೆ ನೀಡಿದ್ದಾರೆ.

- Advertisement -