ರಾಜ್ಯ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಪೊಲೀಸ್ ವಶಕ್ಕೆ

ಹಾಸನ: ದೇಶಾದ್ಯಂತ ಎಸ್.ಡಿ.ಪಿ.ಐ, ಪಿ ಎಫ್ ಐ ಕಾರ್ಯಕರ್ತರ ಮನೆ ಮೇಲೆ ದಾಳಿನಡೆದಿದ್ದು, ರಾಜ್ಯ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರನ್ನು ಹಾಸನದಿಂದ ಪೊಲೀಸರು ಬಂಧಿಸಿದ್ದಾರೆ.

ಕೊಡಗು ಜಿಲ್ಲೆ ಕೊಡ್ಲಿಪೇಟೆ ಮೂಲದ ಅಪ್ಸರ್ ಸೋಮವಾರ ಹಾಸನಕ್ಕೆ ಬಂದು ನೆಲೆಸಿದ್ದರು. ಹಾಸನ ಪೊಲೀಸರ ಸಹಕಾರದೊಂದಿಗೆ ಶನಿವಾರಸಂತೆ ಪೊಲೀಸರು ಮಂಗಳವಾರ ದಾಳಿ ನಡೆಸಿ ಬಂಧಿಸಿದ್ದಾರೆ.

- Advertisement -

ವಿಚಾರಣೆಗಾಗಿ ಸೋಮವಾರಪೇಟೆ ತಹಶೀಲ್ದಾರ್ ಎದುರು ಅಪ್ಸರ್ ಕೊಡ್ಲಿಪೇಟೆ ಅವರನ್ನು  ಪೊಲೀಸರು ಹಾಜರುಪಡಿಸಲಿದ್ದಾರೆ.