2020 ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿದವರಲ್ಲಿ ಅಧಿಕ ಮಂದಿ ದಿನಕೂಲಿ ನೌಕರರು

Prasthutha|

ನವದೆಹಲಿ: 2020 ರಲ್ಲಿ ಆತ್ಮಹತ್ಯೆಗೈದವರ ಪೈಕಿ ಹೆಚ್ಚಿನವರು ದಿನಕೂಲ ಕಾರ್ಮಿಕರು ಎಂಬ ಆಘಾತಕಾರಿ ವರದಿಗಳನ್ನು ಅಪರಾಧ ದಾಖಲೆಗಳ ಸಂಸ್ಥೆ (ಎನ್.ಸಿ.ಆರ್.ಬಿ) ಅಂಕಿಅಂಶಗಳೊಂದಿಗೆ ಬಹಿರಂಗಪಡಿಸಿದೆ.

- Advertisement -

ಕಳೆದ ವರ್ಷ ಶೇಕಡಾ 24.6 ದಿನಕೂಲಿ ಕಾರ್ಮಿಕರು ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿಯನ್ನು ಎನ್.ಸಿ.ಆರ್.ಬಿ ಹೊರಹಾಕಿದೆ. ಮಾತ್ರವಲ್ಲ 7 ವರ್ಷಗಳ ಅವಧಿಗೆ ಹೋಲಿಸಿದರೆ ಇದು ದುಪ್ಪಟ್ಟು ಆಗಿದೆ ಎಂದು ಅದು ತಿಳಿಸಿದೆ.

2020 ರಲ್ಲಿ ದೇಶದಲ್ಲಿ ಒಟ್ಟು 1,53,053 ಆತ್ಮಹತ್ಯೆಗಳಲ್ಲಿ ಗರಿಷ್ಠ 37,666 ಅಥವಾ ಶೇಕಡಾ 24.6 ದಿನಕೂಲಿ ಕಾರ್ಮಿಕರು ಎಂದು ಅಂಕಿಅಂಶಗಳು ತೋರಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ದಿನಕೂಲಿ ಕಾರ್ಮಿಕರು ಅಧಿಕ ಪ್ರಮಾಣದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಹೇಳಲಾಗಿದೆ.

- Advertisement -

2014 ರಲ್ಲಿ ಆತ್ಮಹತ್ಯೆಗೈದವರಲ್ಲಿ ದಿನಕೂಲಿ ಕಾರ್ಮಿಕರ ಪಾಲು ಶೇಕಡಾ 12 ರಷ್ಟಿತ್ತು. ಇದು 2015 ರ ಸಮಯದಲ್ಲಿ 17.8 ಶೇಕಡಾ, 2016 ರ ವೇಳೆ 19.2, 2017 ರಲ್ಲಿ 22.1, 2018 ರಲ್ಲಿ 22.4 ಮತ್ತು 2019 ರಲ್ಲಿ 23.4 ಶೇಕಡಾಕ್ಕೆ ಏರಿಕೆಯಾಗಿದೆ.
ಈ ಮಧ್ಯೆ ಎನ್.ಸಿ.ಆರ್.ಬಿ ರಾಜ್ಯವಾರು ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದ್ದು, ತಮಿಳ್ನಾಡು 6495, ಮಧ್ಯಪ್ರದೇಶ 4945, ಮಹಾರಾಷ್ಟ್ರ 4176, ತೆಲಂಗಾಣ 3831 ಮತ್ತು ಗುಜರಾತ್ 2754 ಮಂದಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಆತ್ಮಹತ್ಯೆಗೆ ನಿರುದ್ಯೋಗ ಸಮಸ್ಯೆಗಳು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ. 2019 ರಲ್ಲಿ ನಿರುದ್ಯೋಗ ಪ್ರಮಾಣ 10.1 ರಿಂದ 10.2 ಶೇಕಡಾಕ್ಕೆ ಏರಿಕೆಯಾಗಿದೆ.

Join Whatsapp