ಆರ್ಯನ್ ಖಾನ್ ಜಾಮೀನಿಗೆ ಶ್ಯೂರಿಟಿ ನೀಡಿದ ಜೂಹಿ ಚಾವ್ಲಾ

Prasthutha|

ಮುಂಬೈ: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನಿನ 1 ಲಕ್ಷ ರೂಪಾಯಿ ಬಾಂಡ್ ಗೆ ನಟಿ ಜೂಹಿ ಚಾವ್ಲಾ ಸಹಿ ಹಾಕಿದ್ದಾರೆ.

- Advertisement -

ಬಾಂಬೆ ಹೈಕೋರ್ಟ್‌ನಲ್ಲಿ ಜೂಹಿ ಬಾಂಡ್‌ಗೆ ಸಹಿ ಹಾಕಿದ್ದು, ಅವರ ಮಧ್ಯಸ್ಥಿಕೆ ಜಾಮೀನು ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡಿದೆ ಎಂದು ವರದಿಯಾಗಿದೆ.

ಶಾರುಖ್ ಖಾನ್ ಅವರ ಆಪ್ತ ಸ್ನೇಹಿತೆಯಾದ ಜೂಹಿ, ಇತ್ತೀಚೆಗೆ ನಟನ ನೋವಿಗೆ ಸ್ಪಂದಿಸಲಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗೊಳಗಾಗಿದ್ದರು. ಆದರೆ ಅದನ್ನೆಲ್ಲಾ ಮೆಟ್ಟಿ ನಿಂತು ಅವರು ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಜೂಹಿ ಚಾವ್ಲಾ ಅವರು ಆರ್ಯನ್ ನನ್ನು ಚಿಕ್ಕಂದಿನಿಂದಲೂ ಬಲ್ಲವರು. ಜೂಹಿ ಬಾಂಡ್‌ಗೆ ಸಹಿ ಹಾಕುತ್ತಿದ್ದಾರೆ ಎಂದು ಆರ್ಯನ್ ಖಾನ್ ವಕೀಲರು ಹೇಳಿದ್ದಾರೆ.

- Advertisement -

53 ವರ್ಷದ ಜೂಹಿ ಚಾವ್ಲಾ ಶಾರುಖ್ ಖಾನ್ ಅವರ ಆರಂಭಿಕ ಸಹ-ತಾರೆಗಳಲ್ಲಿ ಒಬ್ಬರು. ಶಾರುಖ್ ಖಾನ್ ಮತ್ತು ಜೂಹಿ ಅನೇಕ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ.
ಇಬ್ಬರೂ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ನಲ್ಲಿ ಪಾಲುದಾರರಾಗಿದ್ದಾರೆ.

Join Whatsapp