ಬ್ಯಾರಿ ಸಾಹಿತ್ಯ ಬೆಳೆಸಲು ವಿದ್ಯಾರ್ಥಿಗಳ ಕೊಡುಗೆ ಮುಖ್ಯ: ಡಾ. ಎನ್. ಇಸ್ಮಾಯಿಲ್

Prasthutha: December 22, 2021

ಮಂಗಳೂರು: ಬ್ಯಾರಿ ಸಮುದಾಯದ ಸಾಹಿತಿಗಳು ತಮ್ಮ ಮಾತೃ ಭಾಷೆಯಲ್ಲೇ ಸಾಹಿತ್ಯ ರಚನೆ ಮಾಡಿದ್ದಿದ್ದರೆ ಬ್ಯಾರಿ ಭಾಷಾ ಸಾಹಿತ್ಯ ಇಂದು ಇನ್ನಷ್ಟು ಶ್ರೀಮಂತವಾಗಿರುತ್ತಿತ್ತು, ಬದ್ರಿಯಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಎನ್. ಇಸ್ಮಾಯಿಲ್ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯದ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಮಂಗಳವಾರ ನಡೆದ ಬ್ಯಾರಿ ಸಾಹಿತ್ಯ- ನೆಲೆ-ಬೆಲೆ ಪ್ರಚಾರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬ್ಯಾರಿ ಭಾಷೆಗೆ 1400 ವರ್ಷಗಳ ಇತಿಹಾಸವಿದೆ ಮತ್ತು ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ.
ಕರಾವಳಿಯಲ್ಲಿ ತುಳು ಸಂಸ್ಕೃತಿಯೊಂದಿಗೆ ಬೆರೆತಿರುವ ಬ್ಯಾರಿ ಸಾಹಿತ್ಯವನ್ನು ಬೆಳೆಸುವತ್ತ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕಾಗಿದೆ ಎಂದರು.

ಇದೇ ವೇಳೆ ದಿವಂಗತ ಪ್ರೊ.ಬಿ. ಎಂ. ಇಚ್ಲಂಗೋಡು ಸಾಹಿತ್ಯ ಕೃಷಿಯ ಸವಿನೆನಪಿಗಾಗಿ ಅವರ ಪುತ್ರ, ವೃತ್ತಿಯಲ್ಲಿ ಅಭಿಯಂತರರಾಗಿರುವ ಜ|ಹಾರಿಸ್ ಮಹಮ್ಮದ್ ಇಚ್ಲಂಗೋಡು ನೂರಕ್ಕೂ ಅಧಿಕ ಪುಸ್ತಕಗಳನ್ನು ಬ್ಯಾರಿ ಅಧ್ಯಯನ ಪೀಠಕ್ಕೆ ಕೊಡುಗೆಯಾಗಿ ನೀಡಿದರು.

ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿವಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ| ಹರೀಶ್, ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರಾದ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಸಂಶುದ್ದೀನ್ ಮಡಿಕೇರಿ, ಅಹ್ಮದ್ ಬಾವಾ ಮೊಯ್ದೀನ್, ಬದ್ರಿಯಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ರೆಹಮತ್ ಅಲಿ ಉಪಸ್ಥಿತರಿದ್ದರು.

ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಎ ಸಿದ್ದಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿ ಸದಸ್ಯ ಇಬ್ರಾಹಿಂ ಕೋಡಿಜಾಲ್ ಧನ್ಯವಾದ ಸಮರ್ಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶಮಾ ಐಎನ್ಎಂ ಕಾರ್ಯಕ್ರಮ
ನಿರೂಪಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ