ಬೆಂಗಳೂರಿನಲ್ಲಿ ಇಂದಿನಿಂದ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್

Prasthutha|

‘ಯು ಮುಂಬಾ’ ತಂಡದಲ್ಲಿ ಸುಳ್ಯದ ಪ್ರತಿಭೆ ಪ್ರತಾಪ್’ಗೆ ಸ್ಥಾನ

- Advertisement -

ಬೆಂಗಳೂರು: ಕಬಡ್ಡಿ ಕ್ರೀಡೆಯ ಸ್ವರೂಪವ್ನೇ ಬದಲಾಯಿಸಿದ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 8ನೇ ಆವೃತ್ತಿಯು ಇಂದಿನಿಂದ ಬೆಂಗಳೂರಿನ ಶೆರಟನ್ ಗ್ರ್ಯಾಂಡ್ ಹೋಟೆಲ್’ನ ಆವರಣದಲ್ಲಿ ಆರಂಭವಾಗಲಿದೆ. ಕೋವಿಡ್ ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ಟೂರ್ನಿ ಸ್ಥಗಿತಗೊಂಡಿತ್ತು.

ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಬೆಂಗಳೂರು ಬುಲ್ಸ್ ತಂಡ ಬಲಿಷ್ಠ ಯು ಮುಂಬಾ ತಂಡದ ಸವಾಲನ್ನು ಎದುರಿಸಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ರಾತ್ರಿ 8.30ಕ್ಕೆ ನಡೆಯುವ 2ನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡ ತಮಿಳು ತಲೈವಾಸ್ ವಿರುದ್ಧ ಸೆಣಸಾಡಲಿದೆ. ಬೆಂಗಾಲ್ ವಾರಿಯರ್ಸ್ ಹಾಗೂ ಯುಪಿ ಯೋಧಾ ತಂಡಗಳ ನಡುವೆ ಮೊದಲ ದಿನದ ಕೊನೆಯ ಪಂದ್ಯ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್’ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿದೆ.

- Advertisement -

ಒಟ್ಟು 12 ತಂಡಗಳು 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಾಟಗಳು ನಡೆಯಲಿದೆ. ಟೂರ್ನಿಯ ಮೊದಲ 4 ದಿನ ಹಾಗೂ ಆ ಬಳಿಕ ಪ್ರತಿ ಶನಿವಾರದಂದು ಮೂರು ಪಂದ್ಯಗಳು -‘ಟ್ರಿಪಲ್ ಹೆಡರ್’ ನಡೆಯಲಿವೆ.

ಯು ಮುಂಬಾ ತಂಡದಲ್ಲಿ ಸುಳ್ಯದ ಪ್ರತಿಭೆ ಪ್ರತಾಪ್’ಗೆ ಸ್ಥಾನ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮೀಣ ಪ್ರತಿಭೆ ಸಚಿನ್ ಪ್ರತಾಪ್’ಗೆ ಈ ಬಾರಿಯ ಪ್ರೋ ಕಬಡ್ಡಿ ಲೀಗ್’ನಲ್ಲಿ ಯು ಮುಂಬಾ ಪರ ಮೈದಾನಕ್ಕಿಳಿಯಲು ಅವಕಾಶ ದೊರೆತಿದೆ. SDM ಉಜಿರೆ ಕಾಲೇಜಿನ ಪ್ರತಿಭಾನ್ವಿತ ಆಟಗಾರ ಪ್ರತಾಪ್, ರಾಷ್ಟ್ರಮಟ್ಟದ ಪಂದ್ಯಾಕೂಟಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.

Join Whatsapp