ಮರಕ್ಕೆ ಡಿಕ್ಕಿ ಹೊಡೆದ ಬಸ್; ಗಾಯಗೊಂಡ ಪ್ರಯಾಣಿಕರು

Prasthutha|

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಗುದ್ದಿದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಮತ್ತುಓರ್ವ ಗೃಹಿಣಿ ಗಾಯಗೊಂಡ ಘಟನೆ ತಾಲೂಕಿನ ಆಯನೂರು ಬಳಿ ನಡೆದಿದೆ.

- Advertisement -


ಶಿವಮೊಗ್ಗ ನಗರದ ಕಡೆ ಬರುತ್ತಿದ್ದ ಬಸ್ ಮರಕ್ಕೆ ಗುದ್ದಿದ ಪರಿಣಾಮ ರಸ್ತೆ ಪಕ್ಕಕ್ಕೆ ಸರಿದು ನಿಂತಿದೆ. ಪ್ರಯಾಣಿಕರಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಪೈಕಿ ಶಿವಮೊಗ್ಗದ ಪ್ರತಿಷ್ಟಿತ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಗೂ ಗೃಹಿಣಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಕುಂಸಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp