ಪೆನ್‌ ಕಾಕ್ ಸಿಲಾಟ್ ಚಾಂಪಿಯನ್‌ ಶಿಪ್ | ಕಂಚಿನ ಪದಕ ಗೆದ್ದ ಎಂ. ಟೈಗರ್ಸ್’ನ ಸಲ್ಮಾನುಲ್ ಫಾರಿಸ್

Prasthutha|

ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಸಲ್ಮಾನ್

- Advertisement -

ಮಂಗಳೂರು : ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 3ನೇ ದಕ್ಷಿಣ ವಲಯ ಪೆನ್‌ಕಾಕ್ ಸಿಲಾಟ್ ಚಾಂಪಿಯನ್‌ಶಿಪ್ 2021-22 ರಲ್ಲಿ ಎಂ ಟೈಗರ್ಸ್ ತಂಡದ ಸಲ್ಮಾನುಲ್ ಫಾರಿಸ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಜೂನ್ 25 ಮತ್ತು 26 ರಂದು ನಡೆದ ಈ ಚಾಂಪಿಯನ್‌ಶಿಪ್ ನಲ್ಲಿ ದಕ್ಷಿಣ ಕನ್ನಡದ ಎಂ ಟೈಗರ್ಸ್ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -

ವಿದ್ಯಾರ್ಥಿಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. 60-65 ತೂಕದ ವಿಭಾಗ ಮತ್ತು 17-45 ವರ್ಷ ವಯಸ್ಸಿನ ಸೀನಿಯರ್ ವಿಭಾಗದ ಟ್ಯಾಂಡಿಂಗ್ ಆಟದಲ್ಲಿ ಸಲ್ಮಾನುಲ್ ಫಾರಿಸ್ ಕಂಚಿನ ಪದಕವನ್ನು ಗೆದ್ದುಕೊಂಡು ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳು ತರಬೇತುದಾರರಾದ ಇಬ್ರಾಹಿಂ ನಂದಾವರ ಹಾಗೂ ಆಸಿಫ್ ಕಿನ್ಯಾ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದರು.

Join Whatsapp