ತೌಕ್ತೆ ಚಂಡಮಾರುತದ ಅಬ್ಬರ | ‘ಗೇಟ್ ವೇ ಆಫ್ ಇಂಡಿಯಾ’ಗೆ ಅಪ್ಪಳಿಸುತ್ತಿರುವ ಅಲೆಗಳ ಭಯಾನಕ ದೃಶ್ಯ!

Prasthutha|

ಮುಂಬೈ : ದೇಶದಾದ್ಯಂತ ಕರಾವಳಿ ಪ್ರದೆಶಗಳಲ್ಲಿ ತೌಕ್ತೆ ಚಂಡಮಾರುತದ ಅಲೆಯಿಂದಾಗಿ ಹಾನಿಗಳುಂಟಾಗಿದ್ದು, ಅರಬ್ಬಿ ಸಮುದ್ರದಿಂದ ಚಂಡಮಾರುತದ ಅಲೆಗಳು ಗೇಟ್ ವೇ ಆಫ್ ಇಂಡಿಯಾಗೆ ಅಪ್ಪಳಿಸುವ ಭಯಾನಕ ದೃಶ್ಯಗಳು ವ್ಯಾಪಕ ವೈರಲ್ ಆಗಿವೆ.

 ಗೇಟ್ ವೇ ಆಫ್ ಇಂಡಿಯಾದ ಪಕ್ಕದಲ್ಲಿರುವ ತಾಜ್ ಹೋಟೆಲ್ ನಿಂದ ಒಂದು ವೀಡಿಯೊ ರೆಕಾರ್ಡ್ ಆಗಿದ್ದು, ವೀಡಿಯೊಗಳಲ್ಲಿ ದೊಡ್ಡ ಅಲೆಗಳು ಬಲವಾದ ಗಾಳಿಯ ಶಬ್ಧದೊಂದಿಗೆ ಸ್ಮಾರಕದ ಗೋಡೆಗಳ ಮೇಲೆ ಅಪ್ಪಳಿಸುವ ದೃಶ್ಯಗಳು ಭಯಾನಕವಾಗಿದೆ. ಮುಂಬೈ ಕರಾವಳಿಯಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಗಂಟೆಗೆ 114 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -