ಫೆಲೆಸ್ತೀನ್ ಧ್ಯೇಯವನ್ನು ಬೆಂಬಲಿಸಿದ ಭಾರತ | ಪಾಪ್ಯುಲರ್ ಫ್ರಂಟ್ ಸ್ವಾಗತ

Prasthutha|

ಭಾರತವು ಫೆಲೆಸ್ತೀನ್ ಧ್ಯೇಯವನ್ನು ಸಮರ್ಥಿಸಿರುವುದನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೇರ್ಮೆನ್ OMA ಸಲಾಂ ಸ್ವಾಗತಿಸಿದ್ದಾರೆ.

- Advertisement -

ಪ್ರಸಕ್ತ ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ಸಂಬಂಧಿಸಿ ನಡೆದ ವಿಶ್ವಸಂಸ್ಥೆಯ ಮುಕ್ತ ಚರ್ಚೆಯಲ್ಲಿ ಭಾರತೀಯ ರಾಯಭಾರಿ ಟಿ.ಎಸ್. ತಿರುಮೂರ್ತಿಯವರು ಫೆಲೆಸ್ತೀನ್ ಭಾರತದ ಬೆಂಬಲವನ್ನು ಸ್ಪಷ್ಟವಾಗಿ ಪುನರಾವರ್ತಿಸಿದ್ದಾರೆ. ಭಾರತವು ಹಿಂಸಾಚಾರವನ್ನು ಖಂಡಿಸಿದ್ದು ಮಾತ್ರವಲ್ಲದೇ, ಹೊಸದಾಗಿ ಮಾತುಕತೆಯನ್ನು ನಡೆಸಲು ಕೂಡ ಒತ್ತಾಯಿಸಿದೆ. ಈ ಸಮಸ್ಯೆಯ ಪ್ರಾರಂಭದಿಂದಲೇ ದೇಶವು ತಾಳಿದ ಮೌಲ್ಯಾಧಾರಿತ ನಿಲುವಿನಂತೆ ಫೆಲೆಸ್ತೀನ್ ಗೆ ನೀಡಿದ ಬೆಂಬಲವನ್ನು ಪಾಪ್ಯುಲರ್ ಫ್ರಂಟ್ ಸ್ವಾಗತಿಸಿದೆ. ಭಾರತವು ಎಂದೂ ಫೆಲೆಸ್ತೀನ್ ಜನತೆಯ ಹಕ್ಕುಗಳನ್ನು ಎತ್ತಿ ಹಿಡಿದಿದೆ ಮತ್ತು ಇಸ್ರೇಲಿ ಆಕ್ರಮಣವನ್ನು ವಿರೋಧಿಸಿದೆ.

ಗಾಝಾದ ದಿಗ್ಬಂಧಿತ ಜನರ ಮೇಲೆ ಇಸ್ರೇಲ್ ನ ವಿವೇಚನೆಯಿಲ್ಲದ ಬಾಂಬ್ ದಾಳಿಯನ್ನು OMA ಸಲಾಂ ಖಂಡಿಸಿದ್ದಾರೆ. ದಾಳಿಯಲ್ಲಿ 200ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, ಇದರಲ್ಲಿ ಶೇ.25ಕ್ಕೂ ಹೆಚ್ಚು ಮಕ್ಕಳಿದ್ದಾರೆ ಮತ್ತು ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್ ಫೆಲೆಸ್ತೀನಿಯನ್ನರ ಅಧಿಕಾರ ಕಸಿದುಕೊಂಡಿರುವುದು ಮತ್ತು ಅಂತಾರಾಷ್ಟ್ರೀಯ ಒಪ್ಪಂದವನ್ನು ಉಲ್ಲಂಘಿಸಿರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ವಿಶ್ವಸಂಸ್ಥೆಯ ವಿವಿಧ ಪ್ರಸ್ತಾಪಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಟೀಕೆಗಳ ಹೊರತಾಗಿಯೂ, ಭೂ ಅತಿಕ್ರಮಿಸುವುದನ್ನು ಮತ್ತು ಫೆಲೆಸ್ತೀನಿಯನ್ನರನ್ನು ಬಲವಂತವಾಗಿ ಹೊರಗಟ್ಟುವ ವಿಚಾರದಿಂದ ಇಸ್ರೇಲ್ ಎಂದೂ ಹಿಂದೆ ಸರಿದಿಲ್ಲ. ಇದರ ವಿರುದ್ಧ ಪ್ರತಿಭಟನೆ ಮತ್ತು ಪ್ರತಿರೋಧ ವ್ಯಕ್ತಪಡಿಸಿದಾಲೆಲ್ಲಾ ಜನರು ಕ್ರೂರ ಪಡೆಗಳನ್ನು ಮತ್ತು ಹತ್ಯಾಕಾಂಡವನ್ನು ಎದುರಿಸಬೇಕಾಗಿ ಬಂದಿದೆ. ಇದು ಜಗತ್ತಿನ ಕಣ್ಣ ಮುಂದೆಯೇ ನಡೆಯುತ್ತಿರುವ ಒಂದು ಹತ್ಯಾಕಾಂಡವಾಗಿದೆ.

- Advertisement -

ಜನಾಂಗೀಯವಾದಿ ಇಸ್ರೇಲ್ ಜೊತೆಗೆ ಎಲ್ಲಾ ವಿಚಾರದಲ್ಲೂ ಸಹಕರಿಸುತ್ತಾ ಕೇವಲ ಮೌಖಿಕ ಖಂಡನೆಯಿಂದ ಅದನ್ನು ತಡೆಯಲು ಸಾಧ್ಯವಿಲ್ಲ. ಇಸ್ರೇಲ್ ನೊಂದಿಗೆ ಸಂಬಂಧ ಹೊಂದಿರುವ ಅರಬ್ ದೇಶಗಳು ಮತ್ತು ಓ.ಐ.ಸಿ. ತಾವು ಇಸ್ರೇಲ್ ನೊಂದಿಗೆ ಎಲ್ಲಾ ರೀತಿಯ ರಾಜಾತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಅಂತ್ಯಗೊಳಿಸಿ  ಫೆಲೆಸ್ತೀನ್ ಪರವಾದ ತಮ್ಮ  ಬದ್ಧತೆಯನ್ನು ಸಾಬೀತುಪಡಿಸಬೇಕಾಗಿದೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳು ಮುಂದುವರಿದು ದೃಢ ನಿಲುವನ್ನು ತಾಳಬೇಕು. ಈ ಮೂಲಕ ಅವು ಜನಾಂಗೀಯವಾದಿ ದಕ್ಷಿಣ ಆಫ್ರಿಕಾದ ಮೇಲೆ ಹೇರಿದ್ದ ನಿರ್ಬಂಧಗಳನ್ನೆ ಇಸ್ರೇಲ್ ಮೇಲೆ ಹೇರಬೇಕಾಗಿದೆ. ತಾನು  ನಡೆಸಿದ ಅಪರಾಧಕ್ಕೆ ಇಸ್ರೇಲ್ ಮೇಲೆ ಹೊಣೆಹೊರಿಸಬೇಕಾಗಿದೆ. ಮತ್ತಷ್ಟು ರಕ್ತಪಾತವನ್ನು ತಡೆಯಲು ಇದು ಮಾತ್ರವೇ ಮುಂದಿರುವ ದಾರಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಹೇಳಿದೆ.

Join Whatsapp