ತಣ್ಣೀರುಪಂತ ಪಂಚಾಯತ್ ಉಪಚುನಾವಣೆ : ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ಸಿಗೆ ನೆರವಾದ ಬಿಜೆಪಿ !

Prasthutha|

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಾಯ 3ನೇ ಕ್ಷೇತ್ರಕ್ಕೆ ಮಾ.29 ರಂದು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದೆ.  ಅಚ್ಚರಿಯೆಂದರೆ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ಸೂಚಿಸಿ,  ಅವರ ವಿಜಯಕ್ಕೆ ನೆರವಾಗಿದೆ. ಕಾಂಗ್ರೆಸ್ ಪಕ್ಷದ ಬೆಂಬಲಿತರಾಗಿ ಸ್ಪರ್ಧಿಸಿದ್ದ ನವೀನ್ ರವರು 498 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಇವರಿಗೆ ಪ್ರತಿಸ್ಪರ್ಧಿಯಾಗಿ ಎಸ್‌ಡಿಪಿಐ ಪಕ್ಷ ಬೆಂಬಲಿತರಾಗಿ ಸ್ಪರ್ಧಿಸಿದ್ದ ಅಶ್ರಫ್ ಕರಾಯ ರವರು  ಕೇವಲ162 ಮತಗಳನ್ನು ಪಡೆದು  ಸೋಲೊಪ್ಪಿಕೊಂಡರು.

- Advertisement -

ಕಳೆದ ಡಿಸಂಬರ್ ನಲ್ಲಿ ನಡೆದಿದ್ದ ಗ್ರಾಮ ಪಂಚಾಯತ್ ಚುನಾವನೆಯಲ್ಲಿ  ನವೀನ್ ಅವರು ಒಂದನೇ ಮತ್ತು ಮೂರನೇ ವಾರ್ಡಿನಲ್ಲಿ ಸ್ಪರ್ಧಿಸಿ ವಿಜಯಶಾಲಿಯಾಗಿದ್ದರು. ಅದರಲ್ಲಿ ಮೂರನೇ ವಾರ್ಡಿಗೆ ರಾಜೀನಾಮೆ ಸಲ್ಲಿಸಿದ್ದರಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಮಾರ್ಚ್ 29ರಂದು ಉಪಚುನಾವಣೆ ನಡೆದಿತು. ಕಳೆದ ಚುನಾವಣೆಯಲ್ಲಿ ನವೀನ್ ಅವರು 347 ಮತಗಳನ್ನು ಪಡೆದಿದ್ದರೆ, ಈ ಬಾರಿ ಅವರ ಬದಲಿ ಅಭ್ಯರ್ಥಿ 499 ಮತಗಳನ್ನು ಪಡೆದಿದ್ದಾರೆ.  ಇದೇ ವೇಳೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ 220 ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಣಕ್ಕಿಳಿಯದೆ ಕಾಂಗ್ರೆಸ್ಸಿಗೆ ನೆರವಾಗಿತ್ತು.  ಎಸ್ಡಿಪಿಐ ಕಳೆದ ಬಾರಿ 176 ಮತ್ತು ಈ ಬಾರಿ 169 ಮತಗಳನ್ನು ಪಡೆದಿದ್ದರು.  ಕಳೆದ ಚುನಾವಣೆಯಲ್ಲಿ ಒಟ್ಟು 747 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರೆ ಈ ಬಾರಿ 674 ಜನರು ತಮ್ಮ ಹಕ್ಕು ಚಲಾಯಿಸಿದ್ದರು.

ಇಂದಿನ ಫಲಿತಾಂಶದೊಂದಿಗೆ ಕಾಂಗ್ರೆಸ್ ಅಧಿಕಾರದಲ್ಲಿರುವ ತಣ್ಣೀರುಪಂತ ಪಂಚಾಯತ್ ನಲ್ಲಿ ಕಾಂಗ್ರೆಸ್  ತನ್ನ ಬಲವನ್ನು ಹೆಚ್ಚಿಸಿಕೊಂಡಂತಾಗಿದೆ

Join Whatsapp