ಭಾರತದಲ್ಲಿ ಮೊದಲ ಬಾರಿಗೆ ಇಂಗು ಕೃಷಿ: ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋಸೋರ್ಸ್ ಟೆಕ್ನಾಲಜಿಯಿಂದ ಚಾಲನೆ

Prasthutha|
ನವದೆಹಲಿ,ಅ.20: ಸಿಎಸ್ಐಆರ್-ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋಸೋರ್ಸ್ ಟೆಕ್ನಾಲಜಿ ಭಾರತದಲ್ಲಿ ಮೊದಲ ಬಾರಿಗೆ ಇಂಗು(ಹಿಂಗು, ಆಸ್ಫೊಟಿಡಾ) ಕೃಷಿಯನ್ನು ಪ್ರಾರಂಭಿಸಿದೆ. ಅಕ್ಟೋಬರ್ 15 ರಂದು ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯ ಕ್ವಾರಿಂಗ್ ಗ್ರಾಮದಲ್ಲಿರುವ ರೈತರ ಹೊಲದಲ್ಲಿ ಈ ಮಸಾಲೆ ಪದಾರ್ಥದ ಮೊದಲ ಮೊಳಕೆಗಳು ಒಡೆದಿವೆ.

ಭಾರತವು ಪ್ರತಿ ವರ್ಷ ಅಫ್ಘಾನಿಸ್ತಾನ, ಇರಾನ್ ಮತ್ತು ಉಜ್ಬೇಕಿಸ್ತಾನ್‌‌ಗಳಿಂದ ಸುಮಾರು 1200 ಟನ್ ಕಚ್ಚಾ ಇಂಗನ್ನು ಆಮದು ಮಾಡಿಕೊಳ್ಳುತ್ತಿದ್ದು, ಸುಮಾರು 3,730ಕೋಟಿ ರೂ. ವ್ಯಯಿಸುತ್ತಿದೆ.

Join Whatsapp