ಭಯೋತ್ಪಾದಕರು ಕರಾವಳಿ ಜಿಲ್ಲೆಗಳನ್ನು ತಾಣ ಮಾಡಿಕೊಳ್ಳಲು ಯಶಸ್ವಿಯಾಗಿದ್ದಾರೆ: ಕೋಟ ಶ್ರೀನಿವಾಸ್ ಪೂಜಾರಿ

Prasthutha|

ಉಡುಪಿ: ಕರಾವಳಿ ಜಿಲ್ಲೆಗಳನ್ನು ಭಯೋತ್ಪಾದಕರು ತಾಣ ಮಾಡಿಕೊಳ್ಳಲು ಯಶಸ್ವಿಯಾಗಿದ್ದಾರೆ. ಭಟ್ಕಳದಿಂದ ಕೇರಳದವರಿಗೆ ಭಯೋತ್ಪಾದಕ ಚಟುವಟಿಕೆಗಳು ಹಬ್ಬಿವೆ. ಅನ್ಯ ಚಟುವಟಿಕೆಗಳು, ಭಯೋತ್ಪಾದಕ ನೆರವು ಕೊಡುವ ಕೆಲಸ ನಡೆಯುತ್ತಿದೆ. ಎಂತಹ ಸಂದರ್ಭ ಬಂದರೂ ಭಯೋತ್ಪಾದಕರನ್ನು ಮಟ್ಟ ಹಾಕುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ಚಟುವಟಿಕೆ ಮುಕ್ತ ವಾತಾವರಣ ನಿರ್ಮಾಣ ಮಾಡುತ್ತೇವೆ. ಭಯೋತ್ಪಾದಕ ನಿಗ್ರಹ ಕೆಲಸ ಹಿಂದಿನಿಂದಲೂ ರಾಜ್ಯ ಕೇಂದ್ರ ಸರ್ಕಾರ ಮಾಡುತ್ತಿದೆ. ಮಂಗಳೂರಲ್ಲಿ ಎನ್ ಐ ಎ ಕೇಂದ್ರ ಸ್ಥಾಪಿಸಲು ಸರಕಾರದ ಗಮನಕ್ಕೆ ತರುತ್ತೇವೆ ಎಂದರು.

- Advertisement -


ಗ್ರಾಮೀಣ ಭಾಗದ ಜನಕ್ಕೆ ಕುಡಿಯುವ ನೀರು ಕೊಡುವ ಆಸೆ ಇದೆ. ಬಡವರಿಗೆ ಮನೆ, ಶೌಚಾಲಯ, ವಿದ್ಯುತ್ ನೀಡಲು ಅನುಕೂಲ ಆಗುವ ಖಾತೆ ಮೇಲೆ ಆಸಕ್ತಿ ಇದೆ. ವ್ಯಕ್ತಿಯ ಮಾನಸಿಕತೆ ಅರ್ಥ ಮಾಡಿಕೊಂಡು ಸಿಎಂ ಬೊಮ್ಮಾಯಿ ಸಚಿವ ಸ್ಥಾನ ನೀಡುತ್ತಾರೆ. ಕೊಟ್ಟ ಖಾತೆಯನ್ನು ಸಮರ್ಥವಗಿ ನಿಭಾಯಿಸುತ್ತೇನೆ. ಸಚಿವನಾಗಿ ಜನಪರ ಕೆಲಸ ಮಾಡುತ್ತೇನೆ ಎಂದು ಪೂಜಾರಿ ಹೇಳಿದರು.
ಬಿಜೆಪಿ ನಾಯಕರಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡೇ ನಾವು ಕೆಲಸ ಮಾಡಬೇಕು. ಸಚಿವರಾಗಿ ಮೊದಲ ಬಾರಿ ಜಿಲ್ಲೆಗೆ ಬಂದಿದ್ದೇವೆ. ಕಾರ್ಯಕರ್ತರು, ಜನ ಬಹಳ ಉತ್ಸಾಹದಿಂದ ಅಭಿನಂದಿಸಲು ಬಂದಿದ್ದಾರೆ. ಆಗಿರುವ ಪ್ರಮಾದವನ್ನು ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ ಎಂದರು.


ಶಾಸಕ ಜಮೀರ್ ಮನೆ ಗೆ ಇಡಿ ದಾಳಿ ವಿಚಾರದ ಬಗ್ಗೆ ಕೇಳಿದಾಗ, ಬಿಜೆಪಿ ಮನೆಗೆ ರೈಡ್ ಆದರೆ ಐಟಿ ಇಡಿ ಸ್ವತಂತ್ರ ಸಂಸ್ಥೆ, ಕಾಂಗ್ರೆಸ್ ಮನೆಗೆ ರೈಡ್ ಆದರೆ ಅದು ಬಿಜೆಪಿ ಪ್ರೇರಿತವೇ? ಕಾಂಗ್ರೆಸ್ ನವರು ತಮ್ಮ ಮನಸ್ಥಿತಿಯನ್ನು ಸರಿಮಾಡಿಕೊಳ್ಳುವುದು ಒಳ್ಳೆಯದು ಎಂದರು.

Join Whatsapp