ಟೆಂಪೋ – ಬೈಕ್​ ಅಪಘಾತ:
ಕುಟುಂಬದ ನಾಲ್ವರು ಸಾವು

Prasthutha|

ಲಾತೂರ್: ವೇಗವಾಗಿ ಬಂದ ಟೆಂಪೋ ಬೈಕ್​ ಗೆ ಡಿಕ್ಕಿ ಹೊಡೆದು
ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ.

- Advertisement -

ಮೃತರನ್ನು ಹಮೀದ್ ಚಂದುಲಾಲ್ ಸಯ್ಯದ್, ಡೊಂಗರಗಾಂವ್ ಬವಲ್ಗಾಂವ್ ನ ಮುಖೇದ್,ನಾಂದೇಡ್ ಜಿಲ್ಲೆಯ ನಿವಾಸಿ ಆನಂದ್ ಗೋವಿಂದರಾವ್ ಕದಮ್ ಬಬಲ್ಗಾಂವ್,ಲಾತೂರ್ ನ ಅಹಮದ್ಪುರ್ ತಹಸಿಲ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಆರು ಮಂದಿಯು ಒಂದೇ ಮೋಟಾರ್​ ಬೈಕ್​ ನಲ್ಲಿ ಪ್ರಯಾಣಿಸುತ್ತಿದ್ದರು, ಅದರಲ್ಲೂ ತಪ್ಪು ದಿಕ್ಕಿನಲ್ಲಿ ಚಲಿಡುತ್ತಿದ್ದಾಗ, ಎದುರಿನಿಂದ ಟೆಂಪೋ ಬಂದು ಡಿಕ್ಕಿ ಹೊಡೆದಿದೆ.
ಮೃತರು ಕಲಾಂಬ್ ಕಡೆಗೆ ಹೋಗುತ್ತಿದ್ದರು, ಗೇಟಗಾಂವ್ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಲಾತೂರ್ ಸರ್ಕಾರಿ ಆಸ್ಪತ್ರೆಗೆ ಕೊಂಡಯ್ದರು ಎಂದು ಸಬ್ ಇನ್ಸ್‌ ಪೆಕ್ಟರ್ ನಂದಕಿಶೋರ ಕಾಂಬಳೆ ತಿಳಿಸಿದ್ದಾರೆ.
ಈ ಘಟನೆಯ ಕೆಲವೇ ಗಂಟೆಗಳ ಮೊದಲು, ಅಹಮದ್‌ ಪುರ ತೆಹಸಿಲ್‌ ನ ಶಿರೂರ್ ತಾಜ್‌ ಬಂದ್-ಮುಖೇಡ್‌ ನ ಓಮರ್ಗಾ ಪತಿ ಬಳಿ ಇದೇ ರೀತಿಯ ಅಪಘಾತದಲ್ಲಿ ಇಬ್ಬರು ಮೋಟಾರ್‌ ಬೈಕ್ ಸವಾರರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುರಿಗಳನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ಟೆಂಪೋಗೆ ಮೋಟಾರ್ ಬೈಕ್ ಡಿಕ್ಕಿ ಹೊಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp