ಕೋವಿಡ್ ನಿಯಮ ಉಲ್ಲಂಘಿಸಿ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ : ಮೂವರು ಅರ್ಚಕರ ಬಂಧನ

Prasthutha|

ಗದಗ : ಕೋವಿಡ್ ತಡೆಗಟ್ಟಲು ಸರಕಾರ ಧಾರ್ಮಿಕ ಪ್ರಾರ್ಥನಾ ಸ್ಥಳಗಳಿಗೆ ಪ್ರವೇಶ ನಿಷೇಧ ಹೇರಿದೆ. ಮಾತ್ರವಲ್ಲ ಬಹಿರಂಗ ಪ್ರಾರ್ಥನಾ ಸಭೆಗಳನ್ನು ಕೂಡಾ ನಿರ್ಬಂಧಿಸಿದೆ. ಆದರೆ ಇದಾವುದಕ್ಕೂ ತಲೆ ಬಾಗದ ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ಪೂಜೆ ಸಲ್ಲಿಸಲು ಆಕಾಶ ನೀಡಿದ ಮೂವರು ಅರ್ಚಕರನ್ನು ಬಂಧಿಸಲಾಗಿದೆ. ಭಕ್ತರ ಕೋರಿಕೆಯ ಮೇರೆಗೆ ದೇವಸ್ಥಾನದ ಬಾಗಿಲು ತೆಗೆದು ಪೂಜೆಗ ಅವಕಾಶ ಕಲ್ಪಿಸಲಾಗಿತ್ತು ಎನ್ನಲಾಗಿದೆ.

- Advertisement -

ಗ್ರಾಮದಲ್ಲಿ ಆಚರಿಸುವ ಕೊನೆ ಮಂಗಳವಾರದ ಪೂಜೆಯ ಹಿನ್ನೆಲಯಲ್ಲಿ ಯಲ್ಲಮ್ಮದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿ ಮೂರು ‌ಜನ ಅರ್ಚಕರನ್ನು ಬಂಧಿಸಿದ್ದಾರೆ. ಬಂಧಿತ ಅರ್ಚಕರನ್ನು ಫಕ್ಕೀರಪ್ಪ ಚನ್ನಪ್ಪ ಬಾರಕೇರ, ಚನ್ನಪ್ಪ ಫಕ್ಕೀರಪ್ಪ ಬಾರಕೇರ ಹಾಗೂ ಸಂತೋಷ ಫಕ್ಕೀರಪ್ಪ ಬಾರಕೇರ ಎಂದು ಗುರುತಿಸಲಾಗಿದೆ.

ಘಟನೆಯ ಕುರಿತಂತೆ ನಾಗಾವಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗಣೇಶ್ ಹನಮಪ್ಪ ಪೂಜಾರ ಎಂಬವರು ದೂರು ದಾಖಲಿಸಿದ ಆಧಾರದಲ್ಲಿ ಗ್ರಾಮೀಣ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಜಿತಕುಮಾರ್ ಹೊಸಮನಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.



Join Whatsapp