ಮೋದಿ ಭಾಷಣದ ಮಧ್ಯೆ ಕೈ ಕೊಟ್ಟ ಟೆಲಿ ಪ್ರಾಂಪ್ಟರ್: ವೀಡಿಯೋ ವೈರಲ್

Prasthutha: January 18, 2022

ಹೊಸದಿಲ್ಲಿ: ಸೋಮವಾರ ಪ್ರಧಾನಿ ನರೇಂದ್ರ ಮೋದಿ ವರ್ಲ್ಡ್ ಇಕನಾಮಿಕ್ ಫೋರಂನಲ್ಲಿ ವರ್ಚುವಲ್ ಆಗಿ ಭಾಷಣ ಮಾಡುವ ವೇಳೆ ಅವರ ಟೆಲಿಪ್ರಾಂಪ್ಟರ್ ಕೈಕೊಟ್ಟ ಕಾರಣ  ಮಾತನಾಡಲಾಗದೆ ಅವರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದ್ದು, ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಧಾನಿ ಮೋದಿ ಅವರ ವರ್ಚುವಲ್ ಭಾಷಣದ ವೇಳೆ ತಮ್ಮ ಸಿದ್ಧಪಡಿಸಿದ್ದ ಭಾಷಣವನ್ನು ಮೋದಿ ಆರಂಭಿಸಿ ಕೆಲವೇ ಸಮಯದಲ್ಲಿ ಟೆಲಿಪ್ರಾಂಪ್ಟರ್ ಕೈಕೊಟ್ಟಿತ್ತು. ಈ ವೇಳೆ ಕಕ್ಕಾಬಿಕ್ಕಿಯಾದ ಪ್ರಧಾನಿ ಮುಂದೆ ಏನು ಮಾತನಾಡಬೇಕು ಎಂದು ತೋಚದೆ ತೀವ್ರ ಮುಜುಗರಕ್ಕೆ ಒಳಗಾದರು.

ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಹೀಗಾಗಿರುವುದು ಅವರನ್ನು ವಸ್ತುಶಃ ಮುಜುಗರಕ್ಕೆ ತಳ್ಳಿತು. ಆಗ ಎಲ್ಲರಿಗೂ ನನ್ನ ಮಾತುಗಳು ಕೇಳಿಸುತ್ತಿವೆಯೇ ಎಂದು ಮೋದಿ ತಡವರಿಸಿ ಕೇಳಿದರು. ಈ ವೇಳೆ ತಾಂತ್ರಿಕ ಸಿಬ್ಬಂದಿ ಮೋದಿಯ ರಕ್ಷಣೆಗೆ ಬಂದರು. ಸ್ವಲ್ಪ ನಂತರ ಮೋದಿ ತಮ್ಮ ಭಾಷಣ ಆರಂಭಿಸಿದರೂ ಮತ್ತೆ ಮೊದಲಿನಿಂದಲೇ ಭಾಷಣ ಆರಂಭಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, “ಪ್ರಧಾನಿಯ ಸುಳ್ಳನ್ನು ಟೆಲಿ ಪ್ರಾಂಪ್ಟರ್‌ ಗೂ ಸಹಿಸಲಾಗಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!