ಪ್ರಾಣಿ ಬಲಿಯ ಬದಲು ನರ ಬಲಿ; 35 ವರ್ಷದ ಯುವಕನ ದಾರುಣ ಅಂತ್ಯ

Prasthutha: January 18, 2022

ಅಮರಾವತಿ: ಸಂಕ್ರಾಂತಿ ಹಬ್ಬ ಆಚರಣೆ ವೇಳೆ ಪ್ರಾಣಿ ಬಲಿ ಕೊಡುವ ಬದಲು ಯುವಕನ ಕತ್ತು ಸೀಳಿ ಹತ್ಯೆಗೈದ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಸಂಕ್ರಾಂತಿ ಆಚರಣೆಯ ಅಂಗವಾಗಿ ಇಲ್ಲಿನ ಯಲ್ಲಮ್ಮ ದೇವಾಲಯದಲ್ಲಿ ಪ್ರಾಣಿ ಬಲಿಯನ್ನು ಆಯೋಜಿಸಲಾಗಿತ್ತು. ಮೇಕೆಗಳ ಶಿರಚ್ಛೇದಮಾಡಲು ಅನೇಕ ಜನರು ಜಮಾಯಿಸಿದ್ದರು. ಆ ಪ್ರದೇಶದ ಚಲಪತಿ ಎಂಬಾತ ಮೇಕೆಗಳ ಕತ್ತು ಕೊಯ್ಯುತ್ತಿದ್ದನು.

ದುರಾದೃಷ್ಟ ಎಂಬಂತೆ ಚಲಪತಿಯು ಮೇಕೆಯ ಕುತ್ತಿಗೆಯ ಬದಲು ಮೇಕೆ ಯನ್ನು ಹಿಡಿದಿದ್ದ 35 ವರ್ಷದ ಸುರೇಶ್ ಎಂಬಾತನ ಕತ್ತು ಸೀಳಿದ್ದ. ಕುತ್ತಿಗೆಗೆ ಆಳವಾದ ಗಾಯವಾಗಿದ್ದರಿಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆ ಸುರೇಶ್ ಮೃತಪಟ್ಟಿದ್ದಾನೆ. ಆರೋಪಿ ಚಲಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೇಕೆಗಳ ಕತ್ತು ಕೊಯ್ಯುವ ವೇಳೆ ಚಲಪತಿ ಮದ್ಯದ ಅಮಲಿನಲ್ಲಿದ್ದನು ಎಂದು ಪೋಲೀಸರು ತಿಳಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!